ಪಣಜಿ: ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮೋದ್ ಸಾವಂತ್ ಅವರು ಬುಧವಾರ ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಸರಳ ಬಹುಮತಕ್ಕೆ 19 ಸ್ಥಾನಗಳ ಅಗತ್ಯವಿತ್ತು. ವಿಶ್ವಾಸಮತಯಾಚನೆ ವೇಳೆ 12 ಶಾಸಕರನ್ನು ಹೊಂದಿರುವ ಬಿಜೆಪಿಯ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರಕ್ಕೆ 20 ಶಾಸಕರ ಬೆಂಬಲ ಸಿಕ್ಕಿದೆ.

ಒಟ್ಟು 40 ಸದಸ್ಯ ಸ್ಥಾನ ಹೊಂದಿರುವ ಗೋವಾ ವಿಧಾನಸಭೆಯ ಶಾಸಕರ ಸಂಖ್ಯೆ ಸದ್ಯ 36ಕ್ಕೆ ಇಳಿದಿದೆ.ಬಿಜೆಪಿಯ ಮನೋಹರ್ ಪರ್ರೀಕರ್ ಮತ್ತು ಫ್ರಾನ್ಸಿಸ್ ಡಿಸೋಜಾ ಅವರ ನಿಧನ ಮತ್ತು ಕಾಂಗ್ರೆಸ್‌ನ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ್ ಸೋಪ್ತೆ ಅವರ ರಾಜೀನಾಮೆಯಿಂದ ನಾಲ್ಕು ಸಂಖ್ಯೆ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.