ನವದೆಹಲಿ: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು ಎಂದು ಆರೋಪಿಸಿರುವ ತೃಣ ಮೂಲ ಕಾಂಗ್ರೆಸ್(ಟಿಎಂಸಿ), ಜನರ ಜೀವ ಅಷ್ಟೊಂದು ಅಗ್ಗವಾಗಿದೆಯೇ? ಎಂದು ಪ್ರಶ್ನಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟಿಎಂಸಿ ರಾಜ್ಯಸಭಾ ಉಪನಾಯಕಿ ಸಾಗರಿಕಾ ಘೋಷ್, ಸರ್ಕಾರವು ಜನರ ಜೀವದ ಜೊತೆ ನಿರ್ದಯವಾಗಿ ಆಟವಾಡುತ್ತಿದೆ. ದೆಹಲಿ ಕಾಲ್ತುಳಿತ ದುರಂತವು ಭೀಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
.Explainer | ದೇಶದಲ್ಲಿ ನಡೆದ ಪ್ರಮುಖ ಕಾಲ್ತುಳಿತ ದುರ್ಘಟನೆಗಳ ಪಟ್ಟಿ ಇಲ್ಲಿದೆ.ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ‘ಎಕ್ಸ್’ ಖಾತೆ ಹ್ಯಾಕ್: ಹಲವು ಅವಾಂತರ.
ಈ ದುರಂತದಿಂದಾಗಿ ಮೋದಿ ಸರ್ಕಾರ ಆಡಳಿತ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಗರಿಷ್ಠ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ವೈಷ್ಣವ್ ಅವರಿಗೆ ಜವಾಬ್ದಾರಿಯ ಪ್ರಜ್ಞೆ ಇದ್ದರೆ, ಅವರು ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿಗೆ ಜನರ ಜೀವದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ, ಅವರು ಅಶ್ವಿನಿ ವೈಷ್ಣವ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದು ತಡೆಯಬಹುದಾಗಿದ್ದ ವಿಪತ್ತು, ಪವಿತ್ರ ಕುಂಭಮೇಳವನ್ನು ಮೋದಿ ಮತ್ತು ಯೋಗಿ ಸರ್ಕಾರವು ಸಾರ್ವಜನಿಕ ಸಂಪರ್ಕ ಚಟುವಟಿಕೆಯಾಗಿ ಪರಿವರ್ತಿಸಿದೆ. ಕುಂಭ ಮೇಳಕ್ಕೆ ಭಕ್ತರನ್ನು ಬರುವಂತೆ ವಿಡಿಯೊಗಳನ್ನು ಪೋಸ್ಟ್ ಮಾಡುವ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ವಿಫಲವಾಗಿತ್ತು. ಇದರ ಪರಿಣಾಮ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಅನೇಕ ಜನರು ಜೀವ ಕಳೆದುಕೊಂಡರು ಎಂದು ಘೋಷ್ ಕಿಡಿಕಾರಿದ್ದಾರೆ.
.ನಮ್ಮ ಕೈಗಳಿಗೆ ಕೋಳ, ಕಾಲುಗಳಿಗೆ ಸರಪಳಿ ಹಾಕಲಾಗಿತ್ತು: ದಲ್ಜಿತ್ ಸಿಂಗ್.ಪಂಜಾಬ್ ಎಎಪಿ ನಾಯಕ ಮಿತ್ತಲ್ ಮೇಲೆ ದಾಳಿ ಮಾಡಿ ಪತ್ನಿಯನ್ನು ಹತ್ಯೆಗೈದ ದರೋಡೆಕೋರರು.
ಭಾರತೀಯ ರೈಲ್ವೆಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದು ಘೋಷ್ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತ ಅವಘಡದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವರು ಮಂದಿ ಗಾಯಗೊಂಡಿದ್ದಾರೆ.
.PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್.ಕೇರಳದ ಸ್ಟಾರ್ಟ್ಅಪ್ ಪ್ರಗತಿಯನ್ನಷ್ಟೇ ಶ್ಲಾಘಿಸಿದ್ದೇನೆ: ತರೂರ್ ಸ್ಪಷ್ಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.