ಅಮೃತಸರ/ಚಂಡೀಗಢ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ 116 ಭಾರತೀಯರನ್ನು ಹೊತ್ತ ಅಮೆರಿಕದ ವಿಮಾನವು ಶನಿವಾರ ತಡರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಅಮೆರಿಕದಿಂದ ಗಡೀಪಾರು ಆದವರಲ್ಲಿ ಒಬ್ಬರಾದ ದಲ್ಜಿತ್ ಸಿಂಗ್ ಮಾತನಾಡಿ, ‘ಪ್ರಯಾಣದ ಸಮಯದಲ್ಲಿ ನಮ್ಮ ಕೈಗಳಿಗೆ ಬೇಡಿ ತೊಡಿಸಲಾಗಿತ್ತು. ಕಾಲುಗಳಿಗೆ ಸರಪಳಿ ಹಾಕಲಾಗಿತ್ತು’ ಎಂದು ಹೇಳಿದ್ದಾರೆ.

ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಕುರಾಲಾ ಕಲಾನ್ ಗ್ರಾಮದ ನಿವಾಸಿಯಾಗಿರುವ ದಲ್ಜಿತ್ ಸಿಂಗ್, ಶನಿವಾರ ರಾತ್ರಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಆದ 116 ಮಂದಿ ವಲಸಿಗರಲ್ಲಿ ಒಬ್ಬರಾಗಿದ್ದಾರೆ.

‘ಏಜೆಂಟರೊಬ್ಬರು ನಮ್ಮನ್ನು ಅಮೆರಿಕ ಪ್ರವೇಶಿಸಲು ಅಕ್ರಮವಾಗಿ (ಡಂಕಿ) ಮಾರ್ಗದ ಮೂಲಕ ಕರೆದುಕೊಂಡು ಹೋಗಿದ್ದರು’ ಎಂದು ಸಿಂಗ್ ವಿವರಿಸಿದ್ದಾರೆ.

‘ನನ್ನ ಪತಿಯನ್ನು ವಿಮಾನದ ಮೂಲಕವೇ ಕಾನೂನುಬದ್ಧವಾಗಿ ಅಮೆರಿಕಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಟ್ರಾವೆಲ್ ಏಜೆಂಟರೊಬ್ಬರು ನಮ್ಮನ್ನು ವಂಚಿಸಿದ್ದಾರೆ. ವಿಮಾನದ ಬದಲಾಗಿ ‘ಡಂಕಿ’ ಮಾರ್ಗದ ಮೂಲಕ ಅವರನ್ನು ಕರೆದುಕೊಂಡು ಹೋಗಿದ್ದರು’ ಎಂದು ಸಿಂಗ್ ಪತ್ನಿ ಕಮಲ್ಪ್ರೀತ್ ಕೌರ್ ಅಳಲು ತೋಡಿಕೊಂಡಿದ್ದಾರೆ.

ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರದ ಭಾಗವಾಗಿ ಈ ಪ್ರಕ್ರಿಯೆ ನಡೆದಿದ್ದು, ಅಮೆರಿಕವು ವಾಪಸ್ ಕಳುಹಿಸಿದ ಭಾರತೀಯರ ಎರಡನೇ ತಂಡ ಇದಾಗಿದೆ.

ರಾತ್ರಿ 10 ಗಂಟೆಗೆ ಬಂದಿಳಿಯಬೇಕಿದ್ದ ಈ ವಿಮಾನವು ಒಂದೂವರೆ ಗಂಟೆ ತಡವಾಗಿ 11.30 ರ ಸುಮಾರಿಗೆ ಬಂದಿಳಿಯಿತು ಎಂದು ಮೂಲಗಳು ಹೇಳಿವೆ. ವಿಮಾನದಲ್ಲಿ 119 ವಲಸಿಗರಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ, ಈಗ ಪರಿಷ್ಕೃತ ಪ್ರಯಾಣಿಕರ ಪಟ್ಟಿಯ ಪ್ರಕಾರ, ಎರಡನೇ ತಂಡದಲ್ಲಿ ಭಾರತಕ್ಕೆ ಬಂದವರ ಸಂಖ್ಯೆ 116 ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಮಾನದಲ್ಲಿ ಬಂದವರಲ್ಲಿ ಪಂಜಾಬ್ನ 65, ಹರಿಯಾಣದ 33, ಗುಜರಾತ್ನ 8, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಬ್ಬರು ಇದ್ದಾರೆ. ಅಮೆರಿಕವು ವಾಪಸ್ ಕಳುಹಿಸಿದವರಲ್ಲಿ ಹೆಚ್ಚಿನವರು 18 ರಿಂದ 30 ವಯೋಮಾನದವರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕವು ಇನ್ನಷ್ಟು ಅಕ್ರಮ ವಲಸಿಗರನ್ನು ಮತ್ತೊಂದು ವಿಮಾನದ ಮೂಲಕ ಇದೇ 16ರಂದು (ಭಾನುವಾರ) ಭಾರತಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ. ಕಳೆದ ವಾರ 104 ಅಕ್ರಮ ವಲಸಿಗರಿದ್ದ ಅಮೆರಿಕದ ಸೇನಾ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.
.ಆಳ ಅಗಲ | ಅಮೆರಿಕ: ದುಬಾರಿ ಕನಸು.ಅಮೆರಿಕ ದುಃಸ್ವಪ್ನ | ಕೈಗಳಿಗೆ ಕೋಳ...ಅಮೆರಿಕದಿಂದ ಗಡೀಪಾರಾದ ಭಾರತೀಯರ ಕಥೆ–ವ್ಯಥೆ.ಮೊದಲ ಹಂತದಲ್ಲಿ ಅಮೆರಿಕದಿಂದ ವಾಪಸಾದ 104 ಭಾರತೀಯರು.ಅಮೃತಸರಕ್ಕೆ ಬಂದಿಳಿದ 116 ಮಂದಿ ಭಾರತೀಯರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.