ಅಮೆರಿಕದ ಕನಸು ಅನೇಕ ಭಾರತೀಯರ ಪಾಲಿಗೆ ದುಃಸ್ವಪ್ನವಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಅಕ್ರಮ ವಲಸಿಗರನ್ನು ವಿಶೇಷ ಸೇನಾ ವಿಮಾನಗಳಲ್ಲಿ ದೇಶದಿಂದ ಹೊರಗೆ ಕಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಭಾರತಕ್ಕೆ ಮೊದಲ ವಿಮಾನ ಬಂದು ತಲುಪಿದೆ. ವೀಸಾ ಪಡೆದು ಶಿಕ್ಷಣ, ಉದ್ಯೋಗಕ್ಕೆ ಅಮೆರಿಕಕ್ಕೆ ಹೋಗಿ, ಅವಧಿ ಮುಗಿದ ನಂತರವೂ ಅಲ್ಲೇ ಇರುವವರು, ಹಲವು ರೀತಿಯ ಪಾಡು ಪಟ್ಟು, ಭಾರಿ ಸಾಹಸ ಮಾಡಿ ಅಕ್ರಮ (ಡಂಕಿ) ಮಾರ್ಗದ ಮೂಲಕ ಅಮೆರಿಕಕ್ಕೆ ಹೋದವರು ತಮ್ಮ ಊರಿಗೆ ಮರಳಲೇಬೇಕಾಗಿದೆ.

ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದರು ಎನ್ನಲಾದ ವಿದೇಶಿಯರನ್ನು ಅವರ ದೇಶಗಳಿಗೆ ಕಳಿಸುವುದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದು, ಇದರ ಭಾಗವಾಗಿ 205 ಭಾರತೀಯರನ್ನು ಟ್ರಂಪ್ ಸರ್ಕಾರ ಬುಧವಾರ ಸೇನಾ ವಿಮಾನದಲ್ಲಿ ಪಂಜಾಬ್ನ ಅಮೃತಸರಕ್ಕೆ ತಂದು ಇಳಿಸಿದೆ. ಇದು ಆರಂಭ ಮಾತ್ರ ಎನ್ನಲಾಗುತ್ತಿದೆ.

ಅಮೆರಿಕಕ್ಕೆ ಹೋಗುವುದು, ಅಲ್ಲಿ ಕೆಲಸ ಗಳಿಸುವುದು, ಅಲ್ಲಿನ ಪ್ರಜೆ ಆಗುವುದು ಕೋಟ್ಯಂತರ ಭಾರತೀಯರ ಕನಸು. ಅದಕ್ಕೆ ಅಲ್ಲಿನ ವ್ಯವಸ್ಥಿತ ಜೀವನ ಶೈಲಿ, ಉತ್ತಮ ಸಂಬಳ ಆಕರ್ಷಣೆಯಾಗಿವೆ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಓದಿದ ಮತ್ತು ಓದುತ್ತಿರುವ ಬಹುತೇಕರ ದೃಷ್ಟಿ ಅಮೆರಿಕದತ್ತಲೇ ನೆಟ್ಟಿರುತ್ತದೆ. ಅಲ್ಲಿಗೆ ಅಧಿಕೃತವಾಗಿ ಹೋಗಿ, ನೆಲಸಲು ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಎಚ್1ಬಿ ಸೇರಿದಂತೆ ವಿವಿಧ ರೀತಿಯ ವೀಸಾ ಪಡೆದವರು ಅಧಿಕೃತ ಮಾರ್ಗದ ಮೂಲಕ ಅಮೆರಿಕಕ್ಕೆ ಉದ್ಯೋಗ, ಶಿಕ್ಷಣಕ್ಕಾಗಿ ಹೋಗುತ್ತಾರೆ.

ಅಮೆರಿಕದಲ್ಲಿರುವ ಅತಿ ಹೆಚ್ಚು ಮಂದಿ ವಲಸಿಗರ ಪೈಕಿ ಮೆಕ್ಸಿಕನ್ನರು ಮೊದಲ ಸ್ಥಾನದಲ್ಲಿದ್ದರೆ, ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಎಚ್1ಬಿ ವೀಸಾ ಅಡಿ ಅಮೆರಿಕ ಪ್ರವೇಶಿಸುವವರ ಪೈಕಿ ಭಾರತೀಯರು ಮೊದಲ ಸ್ಥಾನದಲ್ಲಿದ್ದು, ಶೇ 72ರಷ್ಟಿದ್ದಾರೆ. ನಂತರದ ಸ್ಥಾನದಲ್ಲಿ ಚೀನಾದವರು (ಶೇ 12ರಷ್ಟು) ಇದ್ದಾರೆ. ಈ ಹಿಂದೆ ಚೀನಾದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಅಮೆರಿಕಕ್ಕೆ ಶಿಕ್ಷಣಕ್ಕಾಗಿ ತೆರಳುತ್ತಿದ್ದರು. ಈಗ ಭಾರತವು ಚೀನಾವನ್ನು ಹಿಂದಿಕ್ಕಿದ್ದು, 2023–24ರಲ್ಲಿ ಅಮೆರಿಕಕ್ಕೆ ವ್ಯಾಸಂಗ ಮಾಡಲು ಹೋದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 3,31,602.

ಭಾರತದಿಂದಷ್ಟೇ ಅಲ್ಲ, ಜಗತ್ತಿನ ಹಲವು ದೇಶಗಳಿಂದ ಜನರು ಅಕ್ರಮವಾಗಿ ಅಮೆರಿಕಕ್ಕೆ ಹೋಗುತ್ತಾರೆ. ಟ್ರಂಪ್ ಆಡಳಿತದ ಸದ್ಯ ಗುರುತಿಸಿರುವ ಭಾರತದಿಂದ ಅಮೆರಿಕಕ್ಕೆ ತೆರಳಿರುವ ಅಕ್ರಮ ವಲಸಿಗರ ಸಂಖ್ಯೆ 17,940. ಆದರೆ, ಅವರಷ್ಟೇ ಅಲ್ಲ. ಪ್ಯೂ ರಿಸರ್ಚ್ ಸೆಂಟರ್ ಪ್ರಕಾರ, ಭಾರತದಿಂದ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋದವರ ಸಂಖ್ಯೆ 7.25 ಲಕ್ಷ (2022ರ ಅಂಕಿಅಂಶ). ಮೆಕ್ಸಿಕೊ, ಎಲ್ಸಾಲ್ವಡಾರ್ ನಂತರ ಅಮೆರಿಕದಲ್ಲಿರುವ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಹೀಗೆ ಹೋದವರು ಗ್ರೀನ್ ಕಾರ್ಡ್ ಪಡೆಯುವ ತನಕ ಅಕ್ರಮ ವಲಸಿಗರಾಗಿಯೇ ಬದುಕಬೇಕಾಗುತ್ತದೆ. ಗ್ರೀನ್ ಕಾರ್ಡ್ ಪಡೆಯುವುದು ದೀರ್ಘಾವಧಿಯ, ಅನಿಶ್ಚಿತವಾದ ಹಾಗೂ ಭಾರಿ ತ್ರಾಸದಾಯಕ ಕೆಲಸ.

ಶಿಕ್ಷಣ, ಉದ್ಯೋಗಕ್ಕಾಗಿ ಅಮೆರಿಕಕ್ಕೆ ಹೋದವರು ತಮ್ಮ ವೀಸಾ ಅವಧಿ ಮುಗಿದ ಮೇಲೂ ಅಲ್ಲಿಯೇ ಇದ್ದರೆ, ಅವರು ಅಕ್ರಮ ವಲಸಿಗರೆನಿಸಿಕೊಳ್ಳುತ್ತಾರೆ. ವೀಸಾ ಇಲ್ಲದೇ ಅಮೆರಿಕಕ್ಕೆ ಹೋಗುವ ಇನ್ನೊಂದು ಮಾರ್ಗ ಇದೆ. ಅದನ್ನು ಅಕ್ರಮ ಮಾರ್ಗ (ಡಂಕಿ) ಎನ್ನಲಾಗುತ್ತದೆ. ಹಲವು ತಿಂಗಳುಗಳನ್ನು ತೆಗೆದುಕೊಳ್ಳುವ ಈ ಪ್ರಯಾಣವು, ಅತ್ಯಂತ ಅಪಾಯಕಾರಿಯಾದ, ಸಾಹಸದ, ದುಬಾರಿ (₹50 ಲಕ್ಷದಿಂದ ₹1 ಕೋಟಿವರೆಗೆ) ವೆಚ್ಚದ್ದಾಗಿರುತ್ತದೆ. ಏಜೆಂಟರಿಗೆ ಭಾರಿ ಮೊತ್ತದ ಹಣ ನೀಡುವುದರ ಜತೆಗೆ, ತೀವ್ರ ಬಿಸಿಲು ಇಲ್ಲವೇ ಹಿಮಪಾತ, ಹಸಿವು, ಕಾಯಿಲೆ, ದೈಹಿಕ ಹಲ್ಲೆ, ಅತ್ಯಾಚಾರದಂತಹ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಅಮೆರಿಕಕ್ಕೆ ಹೋಗುವ ಕನಸಿನೊಂದಿಗೆ ಮನೆ ಬಿಟ್ಟು ಡಂಕಿ ಮಾರ್ಗದಲ್ಲಿ ಹೊರಟವರು ನಾನಾ ಕಾರಣಕ್ಕೆ ಮಾರ್ಗ ಮಧ್ಯೆಯೇ ಸತ್ತುಹೋದ ಘಟನೆಗಳು ಲೆಕ್ಕವಿಲ್ಲದಷ್ಟಿವೆ. 2022ರ ಜನವರಿಯಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಅಮೆರಿಕ ಸೇರುವ ಕನಸಿನೊಂದಿಗೆ ಸಾಗುತ್ತಿದ್ದ ಭಾರತೀಯ ದಂಪತಿ ಕೆನಡಾದ ಗಡಿಯಲ್ಲಿ ತೀವ್ರ ಹಿಮಪಾತಕ್ಕೆ ಸಿಲುಕಿ ಸಾವಿಗೀಡಾಗಿದ್ದರು. ಕೆಲವೊಮ್ಮೆ, ಇಂಥವರನ್ನು ಗಡಿಗಳಲ್ಲೇ ತಡೆಹಿಡಿದು ವಾಪಸ್ ಕಳುಹಿಸಲಾಗುತ್ತಿದೆ. ಅಕ್ಟೋಬರ್ 2020ರಿಂದ ಆಗಸ್ಟ್ 2024ರವರೆಗೆ 86,400 ಭಾರತೀಯರನ್ನು ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ತಡೆದು ವಾಪಸ್ ಕಳಿಸಲಾಗಿದ್ದರೆ, 88,800 ಭಾರತೀಯರನ್ನು ಅಮೆರಿಕ–ಕೆನಡಾದ ಗಡಿಯಲ್ಲಿ ತಡೆಯಲಾಗಿದೆ ಎಂದು ಅಮೆರಿಕದ ಸುಂಕ ಮತ್ತು ಗಡಿ ರಕ್ಷಣಾ ವಿಭಾಗ (ಸಿಬಿಪಿ) ಹೇಳಿದೆ.

ಬಹುತೇಕರು ಕಾರ್ಮಿಕರು

ಅಮೆರಿಕದಲ್ಲಿರುವ ಅಕ್ರಮ ವಲಸಿಗರಲ್ಲಿ 82.50 ಲಕ್ಷ ಮಂದಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ದೇಶದ ಒಟ್ಟು ಕಾರ್ಮಿಕ ಬಲದಲ್ಲಿ ಇವರ ಪಾಲು ಶೇ 4.8. ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳು, ತಯಾರಿಕಾ ಕ್ಷೇತ್ರ, ಆತಿಥ್ಯ, ಉದ್ಯಮ ಸೇವೆಗಳಲ್ಲಿ ಇವರು ದುಡಿಯುತ್ತಿದ್ದಾರೆ.

ಅಮೆರಿಕದ ಸುಂಕ ಮತ್ತು ಗಡಿ ರಕ್ಷಣಾ ಇಲಾಖೆಯ ಪ್ರಕಾರ, 2021ರಲ್ಲಿ 30,662 ಮಂದಿಯನ್ನು ಭಾರತಕ್ಕೆ ವಾಪಸ್ ಕಳಿಸಲಾಗಿತ್ತು.

ಅಮೆರಿಕ ಈ ಹಿಂದೆಯೂ ಅಕ್ರಮ ವಲಸಿಗರನ್ನು ವಿಮಾನಗಳಲ್ಲಿ ಅವರ ದೇಶಕ್ಕೆ ವಾಪಸ್ ಕಳಿಸಿದ ನಿದರ್ಶನಗಳಿವೆ. 2023–24ರಲ್ಲಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು (ಡಿಎಚ್ಎಸ್) 495 ವಿಮಾನಗಳಲ್ಲಿ 145 ದೇಶಗಳ 1,60,000ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಅವರ ಸ್ವದೇಶಗಳಿಗೆ ಕಳುಹಿಸಿಕೊಟ್ಟಿತ್ತು. ಇದರಲ್ಲಿ 1,100 ಭಾರತೀಯರೂ ಇದ್ದರು.

ಅಕ್ರಮ ವಲಸಿಗರನ್ನು ವಾಪಸ್ ಕಳಿಸುವುದಷ್ಟೇ ಅಲ್ಲ, ಟ್ರಂಪ್ ಅವರು ಎಚ್1ಬಿ ವೀಸಾ ನಿಯಮಗಳನ್ನೂ ಬಿಗಿಗೊಳಿಸುವ ಸಂಭವ ಇದೆ. ಅವರ ಮೊದಲ ಅವಧಿಯಲ್ಲಿಯೂ ವೀಸಾ ನಿಯಮಗಳನ್ನು ಬಿಗಿಗೊಳಿಸುವ ಮೂಲಕ ಹೆಚ್ಚಿನ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಬರಾಕ್ ಒಬಾಮ ಅವರ ಅವಧಿಯಲ್ಲಿ ವೀಸಾ ನಿರಾಕರಣೆಯ ಪ್ರಮಾಣ ಶೇ 5–ಶೇ 8ರಷ್ಟಿದ್ದರೆ, ಜೋ ಬೈಡನ್ ಅವಧಿಯಲ್ಲಿ ಅದರ ಪ್ರಮಾಣ ಶೇ 2–ಶೇ 4ರಷ್ಟಿತ್ತು. ಟ್ರಂಪ್ ಅವಧಿಯಲ್ಲಿ (2018) ವೀಸಾ ನಿರಾಕರಣೆಯ ಪ್ರಮಾಣ ಶೇ 24ಕ್ಕೆ ಹೆಚ್ಚಾಗಿತ್ತು. ಈ ಬಾರಿಯೂ ಅದೇ ಪುನರಾವರ್ತನೆ ಆಗಲಿದೆಯೇ ಎನ್ನುವ ಆತಂಕವೂ ಅಮೆರಿಕದೆಡೆಗೆ ದೃಷ್ಟಿ ನೆಟ್ಟಿರುವ ಭಾರತೀಯರಲ್ಲಿದೆ.

ಜೀವನ ಸುಲಭವಲ್ಲ

ಯಾವುದೇ ದಾಖಲೆಗಳಿಲ್ಲದೆ, ಅಕ್ರಮ ವಲಸಿಗರಾಗಿ ಅಮೆರಿಕದಲ್ಲಿ ಬದುಕುವುದು ಸುಲಭವಲ್ಲ. ಇವರೆಲ್ಲ ಆಡಳಿತದ ಕಣ್ಣಿನಿಂದ ಸದಾ ತಪ್ಪಿಸಿಕೊಳ್ಳುತ್ತಿರಬೇಕು. ಇವರಿಗೆ ಉತ್ತಮ ಕೆಲಸಗಳು ಸಿಗುವುದಿಲ್ಲ. ಭಾರತ ಮೂಲದವರು ನಡೆಸುವ ಉದ್ಯಮದಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಾರೆ ಇಲ್ಲವೇ ಗ್ಯಾಸ್ ಸ್ಟೇಷನ್, ಪೆಟ್ರೋಲ್ ಪಂಪ್ನಂಥ ಕಡೆ ಕೆಲಸ ಮಾಡಬೇಕು. ಚಾಲನಾ ಪರವಾನಗಿ ಸೇರಿದಂತೆ ಅಲ್ಲಿನ ಯಾವುದೇ ಸರ್ಕಾರಿ ದಾಖಲೆಗಳನ್ನು ಮಾಡಿಸಿಕೊಳ್ಳಲು ಆಗುವುದಿಲ್ಲ. ಅಪಾಯ ಎದುರಾದ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಲೂ ಅವರು ಹಿಂದೇಟು ಹಾಕುತ್ತಾರೆ. ತನಿಖೆ ವೇಳೆ ತಾನು ಅಕ್ರಮ ವಲಸಿಗ ಎಂದು ಗೊತ್ತಾದರೆ ಎನ್ನುವ ಭಯ ಅವರನ್ನು ಕಾಡುತ್ತದೆ. ಅಮೆರಿಕದಲ್ಲಿ ಈಗಾಗಲೇ ನೆಲಸಿರುವ ಅವರ ನೆಂಟರು, ಪರಿಚಿತರು ಅಥವಾ ಭಾರತೀಯ ಸಮುದಾಯದ ಇತರರ ಆಶ್ರಯದಲ್ಲೇ ಇರುತ್ತಾರೆ.

ಸೇನಾ ವಿಮಾನದಲ್ಲಿ ಏಕೆ?

ಅಮೆರಿಕವು ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ಸೇನಾ ವಿಮಾನಗಳಲ್ಲಿ ಕಳುಹಿಸುತ್ತಿದೆ. ಸಾಮಾನ್ಯ ವಿಮಾನಗಳಿಗೆ ಹೋಲಿಸಿದರೆ, ಸೇನಾ ವಿಮಾನದ ಬಳಕೆಯ ವೆಚ್ಚ ದುಬಾರಿ. ಹಿಂದೆ ಅಕ್ರಮ ವಲಸಿಗರನ್ನು ವಿಶೇಷ ವಿಮಾನಗಳಲ್ಲಿ ಕಳುಹಿಸಲಾಗುತ್ತಿತ್ತು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಟ್ರಂಪ್ ಅವರು ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದ್ದರು. ರಾಷ್ಟ್ರೀಯ ತುರ್ತು ಸ್ಥಿತಿ ಘೋಷಿಸಿದ್ದರು. ದಕ್ಷಿಣದ ಗಡಿಯಲ್ಲಿ ಅಕ್ರಮ ವಲಸಿಗರ ಒಳನುಸುಳುವಿಕೆ ತಡೆಯಲು 1,500 ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ಕಳುಹಿಸುವುದಕ್ಕೆ ಆದ್ಯತೆ ನೀಡುವಂತೆ ಸೇನಾ ಆಡಳಿತಕ್ಕೆ ಸೂಚಿಸಿದ್ದ ಟ್ರಂಪ್, ಸೇನೆಗೆ ನೀಡಿದ ಅನುದಾನವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವಂತೆಯೂ ಸೂಚಿಸಿದ್ದರು. ಇದನ್ನು ಆದ್ಯತೆಯನ್ನಾಗಿ ಪರಿಗಣಿಸಿರುವ ಸೇನೆಯು, ಅಕ್ರಮ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತನ್ನ ವಿಮಾನಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಏನಿದು ‘ಡಂಕಿ ಮಾರ್ಗ’?

ಶಾರುಕ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ ನೆನಪಿರಬಹುದು. ಪಂಜಾಬ್ನಿಂದ ಬ್ರಿಟನ್ಗೆ ಅಕ್ರಮವಾಗಿ ವಲಸೆ ಹೋಗುವುದರ ಕುರಿತಾಗಿರುವ ಸಿನಿಮಾ ಅದು. ಭಾರತದಿಂದ ಅಮೆರಿಕ, ಬ್ರಿಟನ್, ಕೆನಡಾದಂತಹ ಪಶ್ಚಿಮದ ರಾಷ್ಟ್ರಗಳಿಗೆ ಅಕ್ರಮವಾಗಿ ವಲಸೆ ಹೋಗುವ ಮಾರ್ಗವನ್ನು ‘ಡಂಕಿ ಮಾರ್ಗ’ ಎಂದು ಕರೆಯಲಾಗುತ್ತದೆ. ಅಪಾಯಕಾರಿಯಾದ ಈ ಮಾರ್ಗದಲ್ಲಿ ಅಮೆರಿಕ ಪ್ರವೇಶಿಸಲು ಬಯಸುವ ಜನರು ದೇಶದ ಪಂಜಾಬ್, ಹರಿಯಾಣ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಭಾರತೀಯರು ಮೂರು ಮಾರ್ಗಗಳಲ್ಲಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಾರೆ. ಒಂದು ಮೆಕ್ಸಿಕೊ ಗಡಿಯ ಮೂಲಕ, ಮತ್ತೊಂದು ಕೆನಡಾ ಗಡಿಯಿಂದ, ಇನ್ನೊಂದು ಮಾರ್ಗ ಬಹಾಮಾದ ಮೂಲಕ. ಇಲ್ಲಿ ಜಲ ಮಾರ್ಗ ಬಳಸಲಾಗುತ್ತದೆ.

ಈ ಮೂರರಲ್ಲಿ ಮೆಕ್ಸಿಕೊ ಗಡಿ ಮೂಲಕ ಅಮೆರಿಕ ಗಡಿ ಪ್ರವೇಶಿಸುವ ಮಾರ್ಗ ಹೆಚ್ಚು ಬಳಕೆಯಲ್ಲಿದೆ. ಈ ಮಾರ್ಗದಲ್ಲಿ ತೆರಳುವವರು ಹಲವು ರಾಷ್ಟ್ರಗಳ ಮೂಲಕ ಸಾಗಬೇಕಾಗುತ್ತದೆ. ಹಲವು ದಿನ ಪ್ರಯಾಣ ಮಾಡಬೇಕಾಗುತ್ತದೆ.

ಅಮೆರಿಕಕ್ಕೆ ಹೋಗಬಯಸುವ ಅಕ್ರಮ ವಲಸಿಗರು ಲ್ಯಾಟಿನ್ ಅಮೆರಿಕದ ಈಕ್ವೆಡಾರ್, ಬೊಲಿವಿಯಾ, ಗಯಾನದಂತಹ ರಾಷ್ಟ್ರಗಳಿಗೆ ತೆರಳುತ್ತಾರೆ. ಭಾರತೀಯರು ಈ ದೇಶದಲ್ಲಿ ಇಳಿದ ನಂತರ ವೀಸಾ ಪಡೆಯಲು ಅವಕಾಶ ಇದೆ. ಪ್ರವಾಸಿ ವೀಸಾ ಸುಲಭವಾಗಿ ಸಿಗುತ್ತದೆ. ಇಲ್ಲಿಂದ ಏಜೆಂಟರು ಭಾರತೀಯರನ್ನು ಕೊಲಂಬಿಯಾಕ್ಕೆ ಕರೆದೊಯ್ಯುತ್ತಾರೆ. ಅಲ್ಲಿಂದ ಪನಾಮಾದ ಅಪಾಯಕಾರಿ ಡೇರೆನ್ ಕಾಡಿನ ಹಾದಿಯಲ್ಲಿ ತೆರಳಿ, ಬಳಿಕ ಕೋಸ್ಟರೀಕಾ, ನಿಕರಾಗುವಾ, ಹೋಂಡುರಾಸ್, ಎಲ್ ಸಾಲ್ವಡಾರ್, ಗ್ವಾಟೆಮಾಲಾದ ಮೂಲಕ ಮೆಕ್ಸಿಕೊ ತಲುಪಿ, ಅಲ್ಲಿನ ಗಡಿಯಿಂದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಮೆರಿಕ ಪ್ರವೇಶಿಸುತ್ತಾರೆ.

ಕೆಲವರು ದುಬೈನಿಂದ ಮೆಕ್ಸಿಕೊಗೆ ನೇರ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಆದರೆ, ಸಮರ್ಪಕ ದಾಖಲೆಗಳಿಲ್ಲದೇ ಇದ್ದರೆ ಅಲ್ಲಿನ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆಯುವುದರಿಂದ ಬಹುತೇಕರು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಭಾರತದಿಂದ ಟರ್ಕಿ/ಯುರೋಪ್/ರಷ್ಯಾಕ್ಕೆ ತೆರಳಿ ಅಲ್ಲಿಂದ ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳಿಗೆ ಹೋಗಿ ನಂತರ ಮೆಕ್ಸಿಕೊಕ್ಕೆ ಪ್ರಯಾಣಿಸುವವರೂ ಇದ್ದಾರೆ.

ಆಧಾರ: ಪಿಟಿಐ, ಪ್ಯೂ ರಿಸರ್ಚ್ ಸೆಂಟರ್, ಬಿಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.