ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ಕಾರ್ಡ್‌ ಮಿತಿ ರದ್ದು: ಮಸೂದೆ ಮಂಡನೆ

ಭಾರತ ಮೂಲದ ಉದ್ಯೋಗಿಗಳಿಗೆ ಅನುಕೂಲ
Last Updated 8 ಫೆಬ್ರುವರಿ 2019, 18:13 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸುವುದಕ್ಕೆ ಸಂಬಂಧಿಸಿದಂತೆ ಗ್ರೀನ್‌ ಕಾರ್ಡ್‌ ಪಡೆಯಲು ಪ್ರತಿ ದೇಶಕ್ಕೆ ವಿಧಿಸಲಾಗಿರುವ ಮಿತಿಯನ್ನು ತೆಗೆದುಹಾಕಲು ಅನುವು ಮಾಡಿಕೊಡುವ ಎರಡು ಮಸೂದೆಗಳನ್ನು ಇಲ್ಲಿನ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಈ ಮಸೂದೆ ಕಾನೂನು ಆದರೆ ಭಾರತದ ಅನೇಕ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಇಂಥ ಮಸೂದೆಯೊಂದನ್ನು ಮಂಡಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಸೇರಿದಂತೆ ಹಲವಾರು ಕಂಪನಿಗಳು ಒಲವು ತೋರಿದ್ದವು.

ರಿಪಬ್ಲಿಕ್ ಪಕ್ಷದ ಮುಖಂಡ ಮೈಕ್‌ ಲೀ ಹಾಗೂ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಡೆಮಾಕ್ರೆಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಅವರು ಮೇಲ್ಮನೆಯಾದ ಸೆನೆಟ್‌ನಲ್ಲಿ ಮಸೂದೆಯನ್ನು ಮಂಡಿಸಿದ್ದಾರೆ. ಇದೇ ಆಶಯ ಹೊಂದಿರುವ ಮಸೂದೆಯನ್ನು ಕಾಂಗ್ರೆಸ್‌ನ ಝೋ ಲಾಫ್‌ಗ್ರೆನ್‌ ಹಾಗೂ ಕೆನ್‌ ಬಕ್‌ ಅವರು ಕೆಳಮನೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?: ಅಮೆರಿಕ ವರ್ಷಕ್ಕೆ 1.40 ಲಕ್ಷ ಗ್ರೀನ್‌ ಕಾರ್ಡ್‌ಗಳನ್ನು ಮಾತ್ರ ಸಿದ್ಧಪಡಿಸುತ್ತದೆ. ದೇಶವೊಂದರಿಂದ ಬರುವ ಉದ್ಯೋಗಿಗಳಿಗೆ ಈ ಕಾರ್ಡ್‌ಗಳಲ್ಲಿ ಶೇ 7ರಷ್ಟು ಕಾರ್ಡ್‌ಗಳನ್ನು ಮಾತ್ರ ವಿತರಿಸಲಾಗುತ್ತದೆ. ಈಗಿರುವ ವ್ಯವಸ್ಥೆ ಪ್ರಕಾರ, ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಅಥವಾ ಭಾರತದಿಂದ ಅಮೆರಿಕಕ್ಕೆ ಹೋಗುವ ವ್ಯಕ್ತಿ ಗ್ರೀನ್‌ ಕಾರ್ಡ್‌ ಪಡೆಯಲು ಬಹಳ ವರ್ಷ ಕಾಯಬೇಕಾಗುತ್ತದೆ. ಆದರೆ, ಕಡಿಮೆ ಜನಸಂಖ್ಯೆ ಇರುವ ದೇಶದ ಪ್ರಜೆಗೆ ಸುಲಭವಾಗಿ ಈ ಕಾರ್ಡ್‌ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT