ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Biporjoy | ಬಿಪೊರ್‌ಜಾಯ್ ಚಂಡಮಾರುತ: ₹ 240 ಕೋಟಿ ಪರಿಹಾರ ಘೋಷಿಸಿದ ಗುಜರಾತ್ ಸರ್ಕಾರ

Published 15 ಜುಲೈ 2023, 5:28 IST
Last Updated 15 ಜುಲೈ 2023, 5:28 IST
ಅಕ್ಷರ ಗಾತ್ರ

ಅಹಮದಾಬಾದ್‌: ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮವಾಗಿ ಬೆಳೆ ಕಳೆದುಕೊಂಡ ಕಛ್‌ ಹಾಗೂ ಬನಸ್ಕಂಥ ಜಿಲ್ಲೆಯ ರೈತರಿಗಾಗಿ ಗುಜರಾತ್ ಸರ್ಕಾರ ಶನಿವಾರ ₹ 240 ಕೋಟಿ ಪರಿಹಾರ ಘೋಷಿಸಿದೆ.

ಚಂಡಮಾರುತದಿಂದಾಗಿ ಈ ಎರಡೂ ಜಿಲ್ಲೆಗಳ ಸುಮಾರು 1.30 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು.

ಸರ್ಕಾರದ ಹೇಳಿಕೆ ಪ್ರಕಾರ, ರೈತರು ಬೆಳೆದ ದೀರ್ಘಾವಧಿಯ ತೋಟಗಾರಿಕೆ ಬೆಳೆಗೆ ಶೇ 10 ರಿಂದ 33ರಷ್ಟು ಹಾನಿಯಾಗಿದ್ದರೆ, ಪ್ರತಿ ಹೆಕ್ಟೆರ್‌ಗೆ ₹ 25 ಸಾವಿರ ನೀಡಲಾಗುತ್ತದೆ. ಒಂದು ವೇಳೆ ಹಾನಿ ಪ್ರಮಾಣ ಶೇ 33ಕ್ಕಿಂತ ಹೆಚ್ಚಾಗಿದ್ದರೆ, ಗರಿಷ್ಠ ಎರಡು ಹೆಕ್ಟೆರ್‌ಗೆ ಅನ್ವಯವಾಗುವಂತೆ ಪ್ರತಿ ಹೆಕ್ಟೆರ್‌ಗೆ ₹ 1.25 ಲಕ್ಷ ಪರಿಹಾರ ನೀಡಲಾಗುತ್ತದೆ.

ಅಧಿಕಾರಿಗಳು ನಡೆಸಿರುವ ಸಮೀಕ್ಷೆಯ ಪಟ್ಟಿಯಲ್ಲಿ ಹೆಸರಿರುವ ರೈತರು ಪರಿಹಾರ ಪಡೆಯಲು ಸಂಬಂಧಪಟ್ಟ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT