ಮೊರ್ಬಿ:135 ಜನರ ಜೀವ ಬಲಿ ತೆಗೆದುಕೊಂಡ ತೂಗು ಸೇತುವೆ ಕುಸಿತ ದುರಂತದ ಸಂಬಂಧ ಮೊರ್ಬಿ ಪುರಸಭೆಯ ಮುಖ್ಯ ಅಧಿಕಾರಿ ಸಂದೀಪ್ ಸಿನ್ಹ ಜಾಲ ಅವರನ್ನು ಗುಜರಾತ್ ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಸಂದೀಪ್‌ಸಿನ್ಹ ಜಾಲಅವರನ್ನುರಾಜ್ಯ ನಗರಾಭಿವೃದ್ಧಿ ಇಲಾಖೆ ಅಮಾನತುಗೊಳಿಸಿದೆ. ಮುಂದಿನ ಆದೇಶದವರೆಗೆ ಸ್ಥಾನಿಕ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಪುರಸಭೆಯ ಪ್ರಭಾರ ಮುಖ್ಯಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೊರ್ಬಿ ಜಿಲ್ಲಾಧಿಕಾರಿ ಜಿ.ಟಿ. ಪಾಂಡ್ಯ ತಿಳಿಸಿದರು.

ಬ್ರಿಟಿಷರ ಕಾಲದಲ್ಲಿಮೊರ್ಬಿ ಪಟ್ಟಣದಲ್ಲಿಮಚ್ಚು ನದಿಗೆ ನಿರ್ಮಿಸಿದ್ದ 19ನೇ ಶತಮಾನದ ತೂಗುಸೇತುವೆ ಅ.30ರಂದು ಸಂಜೆ ಕುಸಿದು ಬಿದ್ದಿತ್ತು. ದುರಂತದಲ್ಲಿ ಮಹಿಳೆಯರು, ಮಕ್ಕಳು ಮೃತಪಟ್ಟಿದ್ದರು. ಈ ಸೇತುವೆ ದುರಸ್ತಿ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಒರೆವಾ ಸಮೂಹ ಕಂಪನಿಗೆ15 ವರ್ಷಗಳ ಅವಧಿಗೆಪುರಸಭೆಯು ನೀಡಿತ್ತು.230 ಮೀಟರ್ ಉದ್ದದ ಈ ಸೇತುವೆಯ ನವೀಕರಣ ನಿಮಿತ್ತ ಆರು ತಿಂಗಳಿನಿಂದ ನಾಗರಿಕರ ಓಡಾಟ ನಿರ್ಬಂಧಿಸಲಾಗಿತ್ತು. ಅ.26ರಂದು ಇದನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗಿತ್ತು.ಸೇತುವೆ ಕುಸಿತದ ದುರಂತಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.