ನವದೆಹಲಿ: ಹರಿಯಾಣದಲ್ಲಿ ಅಧಿಕಾರಕ್ಕೆ ಬಂದರೆ ಏಳು ಗ್ಯಾರಂಟಿಗಳ ಅಡಿಯಲ್ಲಿ ಒಟ್ಟು 16 ಭರವಸೆಗಳನ್ನು ಈಡೇರಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಬುಧವಾರ ಹೇಳಿದೆ. ಹತ್ತು ವರ್ಷಗಳ ಆಡಳಿತದಲ್ಲಿ ಬಿಜೆಪಿಯು ರಾಜ್ಯವನ್ನು ನಾಶಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪಕ್ಷದ ಪೂರ್ಣ ಪ್ರಮಾಣದ ಪ್ರಣಾಳಿಕೆಯು ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಅದರಲ್ಲಿ ಇನ್ನೂ ಹೆಚ್ಚಿನ ಘೋಷಣೆಗಳು ಇರುತ್ತವೆ ಎಂದು ಪಕ್ಷದ ಮೂಲಗಳು ಹೇಳಿವೆ. ರೈತರ ಪ್ರತಿಭಟನೆಗಳ ಸಂದರ್ಭದಲ್ಲಿ ಮೃತರಾದ ರೈತರಿಗೆ ಸ್ಮಾರಕ ನಿರ್ಮಾಣ, ಅವರ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸುವ ಭರವಸೆಗಳು ಕೂಡ ಇರಲಿವೆ ಎಂದು ಮೂಲಗಳು ಹೇಳಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಖಜಾಂಚಿ ಅಜಯ್ ಮಾಕನ್, ಹಿರಿಯ ನಾಯಕರಾದ ಅಶೋಕ ಗೆಹಲೋತ್, ಟಿ.ಎಸ್. ಸಿಂಹದೇವ ಮತ್ತಿತರರ ಸಮ್ಮುಖದಲ್ಲಿ ಏಳು ಗ್ಯಾರಂಟಿಗಳನ್ನು ಅನಾವರಣ ಮಾಡಿದರು.
ಹರಿಯಾಣದ ಪ್ರಮುಖ ನಾಯಕರಾದ ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಅವರು ಉಪಸ್ಥಿತರಿರಲಿಲ್ಲ. ಇವರಿಬ್ಬರು ರಾಜ್ಯದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಜೊತೆ ಭಿನ್ನಮತ ಹೊಂದಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತದೆ, ಜಾತಿ ಗಣತಿ ನಡೆಸಲಾಗುತ್ತದೆ, ಕೆನೆಪದರ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಲಾಗುತ್ತದೆ, ಬೆಳೆ ಹಾನಿಗೆ ಪರಿಹಾರವನ್ನು ತಕ್ಷಣ ನೀಡಲಾಗುತ್ತದೆ, ಬಡವರಿಗೆ 100 ಯಾರ್ಡ್‌ಗಳ ನಿವೇಶನ ಹಾಗೂ ₹3.5 ಲಕ್ಷದ ಎರಡು ಕೊಠಡಿಗಳ ಮನೆ ನೀಡಲಾಗುತ್ತದೆ ಎಂಬ ಭರವಸೆಗಳನ್ನು ಕೂಡ ಪಕ್ಷವು ನೀಡಿದೆ.
ಏಳು ಗ್ಯಾರಂಟಿಗಳು
ಕುಟುಂಬಗಳಿಗೆ ಸಮೃದ್ಧಿ
ಮಹಿಳೆಯರ ಸಬಲೀಕರಣ
ಯುವಕರಿಗೆ ಸುಭದ್ರ ಭವಿಷ್ಯ
ಸಾಮಾಜಿಕ ಭದ್ರತೆಗೆ ಬಲ
ಹಿಂದುಳಿದ ವರ್ಗಗಳಿಗೆ ಹಕ್ಕುಗಳು
ರೈತರ ಸಮೃದ್ಧಿ
ಬಡವರಿಗೆ ಮನೆ
ಗ್ಯಾರಂಟಿಗಳ ಅಡಿಯಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳು
300 ಯೂನಿಟ್‌ವರೆಗೆ ವಿದ್ಯುತ್ ಉಚಿತ
₹25 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ
ಮಹಿಳೆಯರಿಗೆ ತಿಂಗಳಿಗೆ ₹2000
₹500ಕ್ಕೆ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್
ಎರಡು ಲಕ್ಷ ಖಾಲಿ ಹುದ್ದೆಗಳಿಗೆ ನೇಮಕ
ಮಾದಕವಸ್ತು ಮುಕ್ತ ಹರಿಯಾಣ ಯೋಜನೆ
ವೃದ್ಧರಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ ₹6,000 ಪಿಂಚಣಿ
हरियाणा के लिए 7 वादे-पक्के इरादे
— Congress (@INCIndia) September 18, 2024
🔹महिलाओं को शक्ति
✅ हर महीने 2,000 रुपए
✅ 500 रुपए में गैस सिलेंडर
🔹 सामाजिक सुरक्षा को बल
✅ 6,000 रुपए बुढ़ापा पेंशन
✅ 6,000 रुपए दिव्यांग पेंशन
✅ 6,000 रुपए विधवा पेंशन
✅ पुरानी पेंशन बहाल होगी
🔹 युवाओं को सुरक्षित भविष्य
✅ 2… pic.twitter.com/WWWJIAqqFQ
आज कांग्रेस अध्यक्ष श्री @kharge ने कांग्रेस के वरिष्ठ नेताओं की मौजूदगी में हरियाणा विधानसभा चुनाव के लिए मेनिफेस्टो लॉन्च किया।
— Congress (@INCIndia) September 18, 2024
📍 AICC मुख्यालय, नई दिल्ली pic.twitter.com/iCEiu77v7l
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.