ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ: ಕೇಂದ್ರ ಗೃಹ ಸಚಿವಾಲಯದಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಮಾಹಿತಿ ಇಲ್ಲವಂತೆ

Last Updated 21 ಜನವರಿ 2020, 8:43 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷಗಳನ್ನು ಟೀಕಿಸಲುಪದೇ ಪದೆ ತುಕ್ಡೆ ತುಕ್ಡೆ ಗ್ಯಾಂಗ್‌ ಎಂದು ಬಳಸುತ್ತಲೇ ಇರುತ್ತಾರೆ. ಆದರೆ ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಂಬಂಧಿಸಿದಮಾಹಿತಿಯು ನಮ್ಮಲ್ಲಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ(ಆರ್‌ಟಿಐ) ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಉತ್ತರಿಸಿದೆ.

ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಎನ್ನುವವರು ಕಳೆದ ವರ್ಷ ಡಿಸೆಂಬರ್ 26ರಂದು ಅರ್ಜಿ ಸಲ್ಲಿಸಿದ್ದರು. ಕೇಂದ್ರ ಗೃಹಸಚಿವ ಅಮಿತ್ ಶಾ ನವದೆಹಲಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ, 'ದೆಹಲಿಯ ಜನರು, ಕಾಂಗ್ರೆಸ್ ನೇತೃತ್ವದ ಈ ‘ತುಕ್ಡೆ ತುಕ್ಡೆ ಗ್ಯಾಂಗ್‌’ ಅನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು. ಹಾಗಾಗಿ ಈ ಗ್ಯಾಂಗ್ ಯಾವುದು, ಇದರ ಸದಸ್ಯರು ಯಾರು ಎನ್ನುವ ಮಾಹಿತಿಯನ್ನು ದೇಶಕ್ಕೆ ನೀಡಿ ಎಂದು ಸಾಕೇತ್ ಅರ್ಜಿಯಲ್ಲಿ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಗೃಹ ಸಚಿವಾಲಯವು, ಅಂತಹ ಗ್ಯಾಂಗ್‌ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲಎಂದು ಹೇಳಿದೆ. ಗೃಹಸಚಿವಾಲಯ ನೀಡಿದ ದಾಖಲೆ ಸಮೇತಸಾಕೇತ್ ಅವರು ಟ್ವಿಟ್ ಮಾಡಿದ್ದಾರೆ.

ಅರ್ಜಿ ಸಲ್ಲಿಸಿದ್ದ ಸಾಕೇತ್ ಗೋಖಲೆ ಅವರು ಇಂಡಿಯಾ ಟುಡೆ ಜಾಲತಾಣದೊಂದಿಗೆ ಮಾತನಾಡಿ, ಕೇಂದ್ರ ಗೃಹ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಸಂದರ್ಭಗಳಲ್ಲಿ 'ತುಕ್ಡೆ ತುಕ್ಡೆ ಗ್ಯಾಂಗ್‌' ಎಂಬ ಪದವನ್ನು ಬಳಸಿದ್ದಾರೆ. ಸರ್ಕಾರದ ಉನ್ನತ ವ್ಯಕ್ತಿಗಳೇ ತುಕ್ಡೆ ತುಕ್ಡೆಗ್ಯಾಂಗ್ ಎಂದು ಬಳಸುತ್ತಿರುವಾಗ ಗೃಹ ಸಚಿವಾಲಯವು ಈ ಗ್ಯಾಂಗ್‌ನ ಸದಸ್ಯರ ಪಟ್ಟಿಯನ್ನು ನಿರ್ವಹಿಸುತ್ತಿರಬೇಕು ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.

ತುಕ್ಡೆ-ತುಕ್ಡೆ ಎನ್ನುವ ಪದವನ್ನು ಎಡಪಂಥೀಯರಮೇಲೆ ದಾಳಿ ಮಾಡಲು ಬಲಪಂಥೀಯ ಪಕ್ಷಗಳು ಹೆಚ್ಚಾಗಿ ಬಳಸುತ್ತವೆ.2010ರ ಸಂಸತ್‌ ಭನವದ ಮೇಲಿನ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಜಾರಿಯಾಗಿತ್ತು. ಇದರ ವಿರುದ್ಧ ಜೆಎನ್‌ಯುನಲ್ಲಿ 2016ರ ಫೆಬ್ರುವರಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.

ಎಡಪಂಥೀಯ ಸಂಘಟನೆಯ ಬೆಂಬಲವಿದ್ದ ಅಂದಿನ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನಾರ್ಹ ಘೋಷಣೆಗಳನ್ನು ಕೂಗಲಾಯಿತು ಎಂಬ ಆರೋಪವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಲಪಂಥೀಯ ಸಂಘಟನೆಗಳು ಎಡಪಂಥೀಯ ಸಂಘಟನೆಗಳನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ (ಭಾರತವನ್ನು ತುಂಡು ತುಂಡು ಮಾಡುವ ಉದ್ದೇಶ ಹೊಂದಿರುವ ಸಂಘಟನೆ) ಎಂಬುದಾಗಿ ಕರೆಯಲಾರಂಭಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT