ಮುಂಬೈ: ಹೃದಯಾಘಾತದ ಸಂದರ್ಭದಲ್ಲಿ ಮಿದುಳಿಗೆ ಹಾನಿಯಾಗಿ ಹಾಸಿಗೆ ಹಿಡಿದ 73 ವರ್ಷದ ತಂದೆಯ ಪಾಲನೆಗೆ ಅವರ ಇಬ್ಬರು ಹೆಣ್ಣುಮಕ್ಕಳನ್ನೇ ಬಾಂಬೆ ಹೈಕೋರ್ಟ್ ನೇಮಿಸಿದೆ.

ಇಂಥ ಸ್ಥಿತಿಯಲ್ಲಿರುವ ವ್ಯಕ್ತಿಗೆ ತಮ್ಮನ್ನು ಹಾಗೂ ತಮ್ಮ ಆಸ್ತಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಅಹುಜಾ ಅವರು, ‘ಇಂಥ ಪರಿಸ್ಥಿತಿಯಲ್ಲಿ ನ್ಯಾಯಾಲಯವು ಮೂಕ ಪ್ರೇಕ್ಷಕನಂತೆ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ನ್ಯಾಯಾಲಯವು ಮೇ 8ರಂದು ಈ ಆದೇಶ ಹೊರಡಿಸಿದ್ದು, ಆದೇಶದ ಪ್ರತಿಯು ಬುಧವಾರ ಲಭ್ಯವಾಗಿದೆ.

ವ್ಯಕ್ತಿಯ ಮಿದುಳಿಗೆ 2024ರಲ್ಲಿ ಹಾನಿಯಾಗಿತ್ತು. ಅಂದಿನಿಂದಲೂ ಹಾಸಿಗೆ ಹಿಡಿದಿದ್ದು, ಅರೆಪ್ರಜ್ಞಾವಸ್ಥೆಯಲ್ಲಿದ್ದಾರೆ. ಆದ್ದರಿಂದ ಇಬ್ಬರು ಹೆಣ್ಣುಮಕ್ಕಳನ್ನು ತಂದೆಯ ಪಾಲಕರಾಗಿ ನೇಮಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.