ನವದೆಹಲಿ: ಫಲಿತಾಂಶ ಅಂತಿಮಗೊಳಿಸುವ ಮೊದಲು 10 ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಅಂಕ ನೀಡಿರುವ ದಾಖಲೆಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲು ಸಿಬಿಎಸ್‌ಇ ಶಾಲೆಗಳಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಸ್ವಯಂ ಸೇವಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್, ‘ಪ್ರಚಾರ‘ಕ್ಕಾಗಿ ಕೊನೆಗಳಿಗೆಯಲ್ಲಿ ಇಂಥ ಪ್ರಯತ್ನಗಳನ್ನು ಮಾಡುತ್ತೀರಿ ಎಂದು ಹೇಳಿದೆ.

‘ಸ್ವಯಂ ಸೇವಾ ಸಂಸ್ಥೆಗಳು ವಾಣಿಜ್ಯ ಉದ್ದೇಶಗಳೊಂದಿಗೆ ದಾವೆ ಹೂಡುವವರಂತೆ ನಡೆದುಕೊಳ್ಳಬಾರದು ಮತ್ತು ಉನ್ನತ ಸ್ಥಾನದಲ್ಲಿದ್ದು, ಗೌರವಯುತವಾಗಿ ನಡೆದುಕೊಳ್ಳಬೇಕು‘ ಎಂದು ಹೈಕೋರ್ಟ್ ಹೇಳಿದೆ.

ಸಿಬಿಎಸ್‌ಇ ಫಲಿತಾಂಶದ ಪ್ರಕರಣದ ವಿಚಾರಣೆಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನವೀನ್ ಚಾವ್ಲಾ ಅವರ ರಜಾಕಾಲದ ಪೀಠ, ‘ನೀವು ಕೊನೆ ಗಳಿಗೆಯಲ್ಲಿ ಬಂದು, ಗೆಲ್ಲುತ್ತೀವಿ ಎಂದು ಭಾವಿಸಿದ್ದೀರಿ. ಇದೆಲ್ಲ ಪ್ರಚಾರದ ಸಾಹಸ. ತುಂಬಾ ಕೆಟ್ಟ ಅಭಿರುಚಿ ಕೂಡ. ನೀವು ನಮ್ಮೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯೂ ಸರಿ ಇಲ್ಲ. ನೀವೊಬ್ಬ ಖಾಸಗಿ ದಾವೆದಾರರಂತೆ ವರ್ತಿಸಬೇಕು. ನೀವು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸುತ್ತೀರಿ, ಹಾಗಾಗಿ ನೀವು ಸಾಮಾನ್ಯರಂತೆ ವರ್ತಿಸಲು ಸಾಧ್ಯವಿಲ್ಲ. ನಿಮ್ಮ ಸಮರ್ಥನೆ ಗಟ್ಟಿಯಾಗಿರಬೇಕು‘ ಎಂದು ಹೇಳಿತು.

ಈ ಪ್ರಕರಣ ಕುರಿತು ಕೆಲವು ಸಮಯ ವಾದ–ಪ್ರತಿವಾದಗಳು ನಡೆದ ನಂತರ, ಜಸ್ಟೀಸ್ ಫಾರ್ ಆಲ್‘ ಸ್ವಯಂ ಸೇವಾ ಸಂಸ್ಥೆ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದರು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿತು.

ಅಲ್ಲದೆ ಆಗಸ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗಿರುವ ಮುಖ್ಯ ಅರ್ಜಿಯ ವಿಚಾರಣೆಯನ್ನು ಶೀಘ್ರ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತು.

ಇದನ್ನೂ ಓದಿ... ಉತ್ತರ ಪ್ರದೇಶದಲ್ಲಿ 2022ರಲ್ಲಿ ಪ್ರಜಾಪ್ರಭುತ್ವ ಕ್ರಾಂತಿ: ಅಖಿಲೇಶ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.