ನವದೆಹಲಿ: ಕೋವಿಡ್– 19 ತಡೆಗೆ ಲಸಿಕೆ ಹಾಕುವ ಎರಡನೇ ಹಂತದ ಅಭಿಯಾನದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಅವರ ಪತ್ನಿ ಮಂಗಳವಾರ ದೆಹಲಿಯ ಹಾರ್ಟ್ ಅಂಡ್ ಲಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು.

ಸಚಿವರ ಪತ್ನಿ ನೂತನ್ ಗೋಯಲ್ ಅವರು ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಂಡರು. ನಂತರ ಸಚಿವ ಹರ್ಷವರ್ಧನ್ ಲಸಿಕೆ ಹಾಕಿಸಿಕೊಂಡರು.

ಸೋಮವಾರದಿಂದ ಆರಂಭವಾಗಿರುವ ಎರಡನೇ ಹಂತದ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆ. ಹಾಗೆಯೇ, ಗಂಭೀರ ಕಾಯಿಲೆಗಳಿರುವ 45 ರಿಂದ 59 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ಹಾಕಲಾಗುತ್ತದೆ.
ದೇಶದಲ್ಲಿ ಕೋವಿಡ್ ಲಸಿಕೆ ತೆಗೆದುಕೊಂಡ ಕಾರಣದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಈ ಲಸಿಕೆ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಸಚಿವರು ಹೇಳಿದರು.

‘ಲಸಿಕೆ ಸ್ವೀಕರಿಸಿದ ಕೆಲವು ದಿನಗಳ ನಂತರ ಯಾವುದೇ ಸಾವು ಸಂಭವಿಸಿದಲ್ಲಿ, ಇದು ಲಸಿಕೆಯಿಂದಲೇ ಸಂಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಇಂಥ ಪ್ರಕರಣಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ‘ ಎಂದು ಹರ್ಷವರ್ಧನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.