ಮುಂಬೈ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಸಮೀಪ ಇಂದು (ಭಾನುವಾರ, ಜೂನ್ 15) ಬೆಳಿಗ್ಗೆ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತದ ತನಿಖೆಯನ್ನು 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ನಡೆಸಲಿದೆ.

'ಆರ್ಯನ್ ಗ್ರೂಪ್'ಗೆ ಸೇರಿದ ಬೆಲ್–407 ಹೆಲಿಕಾಪ್ಟರ್ ಪತನಗೊಂಡು ಶಿಶು, ಪೈಲಟ್ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

'ಕೇದಾರನಾಥದಿಂದ ಗುಪ್ತಕಾಶಿಯತ್ತ ಹೊರಟಿದ್ದ ಹೆಲಿಕಾಪ್ಟರ್ನಲ್ಲಿ ಒಂದು ಶಿಶು ಹಾಗೂ ಐವರು ಪ್ರಯಾಣಿಕರು, ಒಬ್ಬರು ಸಿಬ್ಬಂದಿ ಇದ್ದರು. ಬೆಳಿಗ್ಗೆ 5.20ರ ಸುಮಾರಿಗೆ ಗೌರಿಕುಂಡದ ಸಮೀಪ ಅಪಘಾತ ಸಂಭವಿಸಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಅಪಘಾತದ ತನಿಖೆಯನ್ನು ಎಎಐಬಿ ನಡೆಸಲಿದೆ ಎಂದು ತಿಳಿಸಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ), ಮುಂಜಾಗ್ರತಾ ಕ್ರಮವಾಗಿ ಚಾರ್ ಧಾಮ್ನತ್ತ ಚಲಿಸುವ ಹೆಲಿಕಾಪ್ಟರ್ಗಳ ಸಂಚಾರವನ್ನು ಮಿತಿಗೊಳಿಸಿದೆ.

ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ 'AI-171' ಪತನಗೊಂಡು 275ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರಂತ ಇತ್ತೀಚೆಗೆ ಸಂಭವಿಸಿತ್ತು. ಅದರ ಬೆನ್ನಲ್ಲೇ ಇದೀಗ, ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.

ಏರ್ ಇಂಡಿಯಾ ವಿಮಾನ ಪತನದ ತನಿಖೆ ಹೊಣೆಯನ್ನೂ ಎಎಐಬಿಗೆ ವಹಿಸಲಾಗಿದೆ.
.ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ; ಪೈಲಟ್ ಸೇರಿ 7 ಮಂದಿ ಸಾವು.PHOTOS |ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಚಿತ್ರಗಳಲ್ಲಿ ನೋಡಿ ದುರಂತದ ಭೀಕರತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.