ಶಿಮ್ಲಾ: ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 307 ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಶನಿವಾರ ಸಂಜೆಯಿಂದಲೇ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಭರಾರಿಯಲ್ಲಿ 108.2 ಮಿಮೀ, ಮುರಾರಿ ದೇವಿಯಲ್ಲಿ 82 ಮಿಮೀ, ನೈನಾ ದೇವಿಯಲ್ಲಿ 74.4 ಮಿಮೀ, ಮಲ್ರಾನ್ನಲ್ಲಿ 56.2 ಮಿಮೀ, ಬ್ರಹ್ಮಣಿಯಲ್ಲಿ 45.4 ಮಿಮೀ, ಉನಾದಲ್ಲಿ 38 ಮಿಮೀ ಮತ್ತು ಜೋಟ್ನಲ್ಲಿ 36.2 ಮಿಮೀ ಮಳೆಯಾಗಿದೆ.

ಮಂಡಿ ಜಿಲ್ಲೆಯಲ್ಲಿ 156, ಕುಲ್ಲು ಜಿಲ್ಲೆಯಲ್ಲಿ 68 ರಸ್ತೆಗಳು ಸೇರಿದಂತೆ ರಾಜ್ಯದ ವಿವಿದೆಢೆ ಒಟ್ಟು 307 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್ಇಒಸಿ) ತಿಳಿಸಿದೆ.

ಮಳೆಯಿಂದಾಗಿ ರಾಜ್ಯದಾದ್ಯಂತ 284 ವಿದ್ಯುತ್ ಟ್ರಾನ್ಸ್ಫಾರ್ಮರ್ ಮತ್ತು 210 ನೀರು ಸರಬರಾಜು ಯೋಜನೆಗಳಿಗೆ ಹಾನಿಯಾಗಿದೆ. ಮುಂಗಾರು ಆರಂಭವಾದಾಗಿನಿಂದ ರಾಜ್ಯದಲ್ಲಿ ಒಟ್ಟು ₹1,692 ಕೋಟಿ ನಷ್ಟವಾಗಿದೆ ಎಂದು ಎಸ್ಇಒಸಿ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಈ ವರ್ಷ ಮಳೆ ಸಂಬಂಧಿತ ಅವಘಡಗಳಿಂದ 101 ಮಂದಿ ಮೃತಪಟ್ಟಿದ್ದು, 36 ಜನರು ಕಾಣೆಯಾಗಿದ್ದಾರೆ. 1,600 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ರಾಜ್ಯವು ಈ ವರ್ಷ 51 ಹಠಾತ್ ಪ್ರವಾಹಗಳು, 28 ಮೇಘಸ್ಫೋಟಗಳು ಮತ್ತು 45 ಭೂಕುಸಿತಗಳಿಗೆ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.