ಬಿಲಾಸ್ಪುರ (ಹಿಮಾಚಲ ಪ್ರದೇಶ): ಮಾದಕ ವಸ್ತುಗಳ ಸಾಗಣೆಯನ್ನು ತಡೆಯಲು ಬಿಲಾಸ್ಪುರ ಜಿಲ್ಲೆಯ ಲಘಾಟ ಗ್ರಾಮದ ಮಹಿಳೆಯರು ರಾತ್ರಿ ಗಸ್ತು ತಿರುಗುತ್ತಾರೆ.

ಸುಮಾರು 25ರಿಂದ 50 ವರ್ಷದ ಲಘಾಟ ಮಹಿಳಾ ಮಂಡಳಿ ಸದಸ್ಯರು ಕೊರೆಯುವ ಚಳಿಯಲ್ಲೂ ಟಾರ್ಚ್ ಮತ್ತು ಕೋಲು ಹಿಡಿದು, ಗುಂಪುಗಳಾಗಿ ಪ್ರತಿದಿನ ರಾತ್ರಿ ಗ್ರಾಮದ ಬೀದಿಗಳಲ್ಲಿ ಗಸ್ತು ತಿರುಗುತ್ತಾರೆ.

ದಾರಿಹೋಕರ ಮೇಲೆ ನಿಗಾ ಇಟ್ಟು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಕಾರ್ಯವನ್ನು ಈ ಮಹಿಳೆಯರ ಗುಂಪು ಮಾಡುತ್ತಿದ್ದು, ಮಾದಕ ವ್ಯಸನಗಳಿಂದ ತಮ್ಮ ಮಕ್ಕಳನ್ನು ದೂರವಿಡುವ ಸಲುವಾಗಿ ಈ ಕ್ರಮವನ್ನು ಕೈಗೊಂಡಿದೆ.

‘ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುವವರನ್ನು ಬಂಧಿಸುವುದು ಮತ್ತು ಗ್ರಾಮವನ್ನು ಸುರಕ್ಷಿತವಾಗಿರಿಸುವುದು ನಮ್ಮ ಗುರಿ. ಮಾದಕ ವಸ್ತು ವ್ಯಸನವು ಕೇವಲ ವ್ಯಕ್ತಿಯನ್ನು ಹಾಳು ಮಾಡುವುದಲ್ಲದೆ, ಅವರ ಕುಟುಂಬ ಮತ್ತು ಸಮಾಜವನ್ನೇ ಹಾಳು ಮಾಡುತ್ತದೆ’ ಎಂದು ಮಹಿಳಾ ಮಂಡಳಿಯ ಮುಖ್ಯಸ್ಥೆ ಪಿಂಕಿ ಶರ್ಮಾ ಸೋಮವಾರ ತಿಳಿಸಿದ್ದಾರೆ.

‘ಮಾದಕ ವಸ್ತುಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಮತ್ತು ಆಡಳಿತದೊಂದಿಗೆ ಸಮುದಾಯವು ಕೈಜೋಡಿಸುವುದು ಅತ್ಯಗತ್ಯ. ಗ್ರಾಮದಲ್ಲಿ ಮಾದಕ ವಸ್ತು ವ್ಯಾಪಾರಿಗಳಿಗೆ ಮತ್ತು ಅವರಿಗೆ ಆಶ್ರಯ ನೀಡುವವರಿಗೆ ಜಾಗವಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.