ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಡನ್‌ಬರ್ಗ್ ಸೆಬಿ ವಿಶ್ವಾಸಾರ್ಹತೆಯ ಮೇಲೆ ದಾಳಿ ನಡೆಸುತ್ತಿದೆ: ಬುಚ್

Published : 11 ಆಗಸ್ಟ್ 2024, 13:15 IST
Last Updated : 11 ಆಗಸ್ಟ್ 2024, 13:15 IST
ಫಾಲೋ ಮಾಡಿ
Comments

ಮುಂಬೈ: ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ ಸೆಬಿಯ ವಿಶ್ವಾಸಾರ್ಹತೆ ಮೇಲೆ ದಾಳಿ ನಡೆಸುತ್ತಿದೆ. ಅಲ್ಲದೇ ಅದರ ಅಧ್ಯಕ್ಷರ ತೇಜೋವಧೆ ಮಾಡುತ್ತಿದೆ ಎಂದು ಸೆಬಿಯ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಮತ್ತು ಅವರ ಪತಿ ಧವಲ್ ಅವರು ಭಾನುವಾರ ಹೇಳಿದ್ದಾರೆ.

ಸೆಬಿಯ ಆರೋಪಗಳಿಗೆ ದೀರ್ಘ ಪತ್ರದ ಮೂಲಕ ಅವರು ಉತ್ತರಿಸಿದ್ದಾರೆ.

‘ನಮ್ಮ ಹೂಡಿಕೆಗೆ ಸಿಂಗಪುರ ಮೂಲದ ಪ್ರವರ್ತಕ ಕಂಪನಿಯಾದ ಐಐಎಫ್‌ಎಲ್ ವೆಲ್ತ್ ಮ್ಯಾನೇಜ್ಮೆಂಟ್‌ ಹಣ ಒದಗಿಸಿದೆ. ಮಾಧವಿಯವರು ಸೆಬಿಯ ಪೂರ್ಣಕಾಲಿಕ ಸದಸ್ಯರಾಗುವುದಕ್ಕೂ ಎರಡು ವರ್ಷ ಮೊದಲೇ ಇದು ನಡೆದಿತ್ತು. ಧವಲ್ ಅವರು 2019ರಿಂದಲೇ ಬ್ಲಾಕ್‌ಸ್ಟೋನ್‌ನ ಹಿರಿಯ ನಿರ್ದೇಶಕರಾಗಿದ್ದರು. 2017ರಲ್ಲಿ ಮಾಧವಿಯವರು ಸೆಬಿಯ ಪೂರ್ಣಕಾಲಿಕ ಸದಸ್ಯರಾದ ಕೂಡಲೇ ಅವರ ಎರಡು ಕನ್ಸಲ್ಟಿಂಗ್‌ ಕಂಪನಿಗಳು ನಿಷ್ಕ್ರಿಯವಾದವು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಭಾರತದಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಹಿಂಡನ್‌ಬರ್ಗ್‌ಗೆ ನೋಟಿಸ್ ನೀಡಲಾಗಿತ್ತು. ಆದರೆ ಕಾರಣ ಕೇಳಿ ನೋಟಿಸ್‌ಗೆ ಉತ್ತರಿಸುವ ಬದಲು, ಹಿಂಡನ್‌ರ್ಗ್ ಸೆಬಿಯ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವ ಹಾಗೂ ಅದರ ಮುಖ್ಯಸ್ಥರ ತೇಜೋವಧೆಗೆ ಇಳಿದಿರುವ ದುರದೃಷ್ಠಕರ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT