ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ, ಪ್ರಧಾನಿ ಕುರಿತ ಉಪರಾಷ್ಟ್ರಪತಿ ಧನಕರ್ ಹೇಳಿಕೆಗೆ ರಾವುತ್ ತಿರುಗೇಟು

Published 28 ನವೆಂಬರ್ 2023, 9:53 IST
Last Updated 28 ನವೆಂಬರ್ 2023, 9:53 IST
ಅಕ್ಷರ ಗಾತ್ರ

ಮುಂಬೈ: ಮಹಾತ್ಮ ಗಾಂಧಿ ಅವರು ಮಹಾಪುರುಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಯುಗಪುರುಷ ಎಂಬ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾ (ಯುಬಿಟಿ) ಬಣದ ನಾಯಕ ಸಂಜಯ್‌ ರಾವುತ್‌, ಇದನ್ನು ಇತಿಹಾಸ ಹಾಗೂ ಜನ ನಿರ್ಧರಿಸುತ್ತಾರೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್‌, ಮಹಾತ್ಮ ಗಾಂಧಿ ಅವರನ್ನು ಜಗತ್ತು ಪೂಜಿಸುತ್ತದೆ. ಯಾರು ಪುರುಷ, ಯುಗಪುರುಷ ಮತ್ತು ಮಹಾಪುರುಷ ಎಂದು ಇತಿಹಾಸ ಹಾಗೂ ಜನರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ಸೋಮವಾರ ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್‌ ರಾಜಚಂದ್ರ ಅವರ ಜ್ಮನ ದಿನಾಚರಣೆಯಲ್ಲಿ ಮಾತನಾಡಿದ ಜಗದೀಪ್‌ ಧನಕರ್‌, ‘ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಸ್ವತಂತ್ರಗೊಳಿಸಿದರು. ಅದೇ ರೀತಿಯಲ್ಲಿ ಭಾರತದ ಯಶಸ್ವಿ ಪ್ರಧಾನಿ, ನರೇಂದ್ರ ಮೋದಿ ಅವರು ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಯಲ್ಲಿ ನಮ್ಮನ್ನು ಕರೆದೊಯ್ದಿದ್ದಾರೆ’ ಎಂದು ಅವರು ಹೇಳಿದ್ದರು

‘ಮಹಾತ್ಮ ಗಾಂಧಿ ಅವರು ಕಳೆದ ಶತಮಾನದ ಮಹಾಪುರಷರಾಗಿದ್ದರು. ಈ ಶತಮಾನದ ಯುಗಪುರಷ ನರೇಂದ್ರ ಮೋದಿಯವರಾಗಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ಧನಕರ್ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT