ಸಂಭಲ್: ಉತ್ತರ ಪ್ರದೇಶದ ಸಂಭಲ್ನ ಖಗ್ಗು ಸರೈನಲ್ಲಿರುವ ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ 46 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೋಳಿ ಹಬ್ಬ ಆಚರಿಸಲಾಯಿತು.

1978ರ ಗಲಭೆಯ ನಂತರ ಈ ದೇವಾಲಯ ಮುಚ್ಚಲ್ಪಟ್ಟಿತ್ತು. ಕಳೆದ ವರ್ಷ ಡಿಸೆಂಬರ್ನಲ್ಲಿ ಮತ್ತೆ ತೆರೆಯಲಾಗಿತ್ತು.

ಹೋಳಿ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಹಿಂದೂ ಸಂಘಟನೆಗಳು ಉತ್ಸಾಹದಿಂದ ಭಾಗವಹಿಸಿದವು.

‘ಖಗ್ಗು ಸರೈನಲ್ಲಿರುವ ಕಾರ್ತೀಕೇಯ ಮಹಾದೇವ ದೇವಸ್ಥಾನದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ. ಜನರು ಸುರಕ್ಷಿತ ವಾತಾವರಣದಲ್ಲಿ ಹಬ್ಬವನ್ನು ಆನಂದಿಸುತ್ತಿದ್ದಾರೆ. ಸುಗಮ ಆಚರಣೆಗಾಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ತಿಳಿಸಿದ್ದಾರೆ.

46 ವರ್ಷಗಳ ಬಳಿಕ, ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ ಹೋಳಿ ಆಡುವ ಭಾಗ್ಯ ನಮಗೆ ಸಿಕ್ಕಿದೆ. ವಿವಿಧ ಸಾಮಾಜಿಕ ಸಂಘಟನೆಗಳ ಜನರು ಇಲ್ಲಿ ಜಮಾಯಿಸಿದ್ದು, ಹೂವುಗಳು ಮತ್ತು ಬಣ್ಣಗಳೊಂದಿಗೆ ಹೋಳಿ ಆಚರಿಸುತ್ತಿದ್ದಾರೆ.
ಆನಂದ್ ಅಗರವಾಲ್, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.