ಹೈದರಾಬಾದ್: ಇಲ್ಲಿನ 11 ವರ್ಷದ ಬಾಲಕನೊಬ್ಬ ಎಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ.

ಆ ಬಾಲಕನ ಹೆಸರು ಮಹಮ್ಮದ್ ಹಸನ್ ಅಲಿ. ಈತ ಹೈದರಾಬಾದಿನಲ್ಲಿ ಏಳನೇ ತರಗತಿ ಓದುತ್ತಿದ್ದಾನೆ.

ಅಲಿ ಪ್ರತಿದಿನ ತನ್ನ ಶಾಲೆಯ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಂಜೆ 6 ಗಂಟೆಗೆಎಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗುವ ಈತ 2020ರ ವೇಳೆಗೆ 1000 ವಿದ್ಯಾರ್ಥಿಗಳಿಗೆ ಬೋಧಿಸುವ ಗುರಿ ಹೊಂದಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

‘ನಾನು ಕಳೆದ ವರ್ಷದಿಂದ ಬೋಧನೆಯಲ್ಲಿ ತೊಡಗಿದ್ದಾನೆ. ಬೆಳಿಗ್ಗೆ ಶಾಲೆಗೆ ಹೋಗಿ 3 ಗಂಟೆ ವೇಳೆಗೆ ಮನೆಗೆ ವಾಪಸ್ಸಾಗುತ್ತೇನೆ. ನಂತರ ನನ್ನ ಪಾಠ ಮತ್ತು ಆಟಗಳನ್ನು ಮುಗಿಸಿಕೊಂಡು ಸಂಜೆ ತರಬೇತಿ ಕೇಂದ್ರಕ್ಕೆ ಹೋಗಿ ಸಿವಿಲ್, ಮೆಕಾನಿಕಲ್, ಎಲೆಕ್ಟ್ರೀಕಲ್ ವಿದ್ಯಾರ್ಥಿಗಳಿಗೆ ಬೋಧಿಸುತ್ತೇನೆ’ ಎಂದು ಅಲಿ ತನ್ನ ದಿನಚರಿಯನ್ನು ಹೇಳುತ್ತಾನೆ.

‘ನಮ್ಮ ದೇಶದ ಎಂಜಿನಿಯರ್‌ಗಳು ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೊರತಾದ ಕೆಲಸಗಳನ್ನು ಮಾಡುವ ವಿಡಿಯೊಗಳನ್ನು ಅಂತರ್ಜಾಲದಲ್ಲಿ ನೋಡಿದೆ. ಆಗ ಎಂಜಿನಿರ್‌ಗಳಲ್ಲಿ ಅಡಗಿರುವ ಕೊರತೆ ಏನು ಎಂದು ಚಿಂತಿಸಿದೆ. ಇದಕ್ಕೆ ತಂತ್ರಜ್ಞಾನ ಹಾಗೂ ಸಂವಹನ ಕೌಶಲ್ಯದ ಕೊರತೆಯೇ ಕಾರಣ ಎಂದು ತಿಳಿಯಿತು. ಅಲ್ಲದೇ ನನಗೂ ಇದೇ ಕ್ಷೇತ್ರದಲ್ಲಿ ಆಸಕ್ತಿಯಿರುವ ಕಾರಣ ಕಲಿಯಲು ಮತ್ತು ಕಲಿಸಲು ಶುರುಮಾಡಿದೆ’ ಎಂದು ಅಲಿ ತನ್ನ ಕಾರ್ಯದ ಹಿಂದಿನ ಆಸಕ್ತಿಯನ್ನು ಬಿಚ್ಚಿಡುತ್ತಾರೆ.

ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಅಲಿಯ ಬೋಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.