ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ದನದ ಮಾಂಸ ಸೇರಿದಂತೆ ಯಾವುದೇ ಮಾಂಸ ತಿನ್ನುವುದಿಲ್ಲ; ಕಂಗನಾ

Published 8 ಏಪ್ರಿಲ್ 2024, 7:04 IST
Last Updated 8 ಏಪ್ರಿಲ್ 2024, 7:04 IST
ಅಕ್ಷರ ಗಾತ್ರ

ಮುಂಬೈ: ನಾನು ದನದ ಮಾಂಸ ಸೇರಿದಂತೆ ಯಾವುದೇ ಮಾಂಸ ತಿನ್ನುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರನೌತ್, ನಾನೊಬ್ಬಳು ಹೆಮ್ಮೆಯ ಹಿಂದು ಎಂದು ಹೇಳಿದ್ದಾರೆ.

‘ನಾನು ದನದ ಮಾಂಸವನ್ನಾಗಲಿ ಅಥವಾ ಇನ್ಯಾವುದೇ ರೀತಿಯ ಮಾಂಸವನ್ನು ತಿನ್ನುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹಬ್ಬಿಸುತ್ತಿರುವುದು ನಾಚಿಕೆಗೇಡಿನ ವಿಷಯ. ನಾನು ದಶಕಗಳಿಂದ ಯೋಗ ಮತ್ತು ವೇದ ಆಧರಿತ ಜೀವನ ಶೈಲಿಯನ್ನು ಅನುಸರಿಸುತ್ತಿದ್ದೇನೆ ಹಾಗೂ ಉತ್ತೇಜಿಸುತ್ತಿದ್ದೇನೆ. ವದಂತಿ ಹಬ್ಬಿಸುವ ತಂತ್ರಗಳಿಂದ ನನ್ನ ಹೆಸರಿಗೆ ಕಳಂಕ ಹಚ್ಚಲು ಸಾಧ್ಯವಿಲ್ಲ. ನಾನು ಏನೆಂಬುದು ನನ್ನ ಜನರಿಗೆ ಗೊತ್ತಿದೆ. ನಾನೊಬ್ಬಳು ಹೆಮ್ಮೆಯ ಹಿಂದು ಎಂಬುದು ಅವರಿಗೆ ಗೊತ್ತಿದೆ. ಅವರನ್ನು ಯಾರೂ ಹಾದಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ಕಂಗನಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ ದನದ ಮಾಂಸ ತಿನ್ನುತ್ತಾರೆ ಎಂದು ಕೆಲವರು ಪೋಸ್ಟ್ ಮಾಡಿದ ಬೆನ್ನಲ್ಲೇ ಕಂಗನಾ ಈ ಸ್ಪಷ್ಟನೆ ನೀಡಿದ್ದಾರೆ.

ಬೀಫ್ ಅಥವಾ ಯಾವುದೇ ಇತರೆ ಮಾಂಸ ತಿನ್ನುವುದರಲ್ಲಿ ತಪ್ಪಿಲ್ಲ. ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ. 8 ವರ್ಷಗಳ ಹಿಂದೆ ಕಂಗನಾ ಸಸ್ಯಾಹಾರಿಯಾಗಿ ಬದಲಾದರು ಎಂಬ ಸತ್ಯ ಗುಟ್ಟಾಗಿ ಏನೂ ಉಳಿದಿಲ್ಲ. ಅವರು ಈಗಲೂ ಒಂದು ಧರ್ಮವನ್ನು ನಂಬುವುದಿಲ್ಲ. ಅವರ ಸಹೋದರ ಬೀಫ್ ತಿನ್ನುತ್ತಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ನನಗೆ ದನದ ಮಾಂಸ ಇಷ್ಟ ಮತ್ತು ನಾನು ಅದನ್ನು ತಿನ್ನುತ್ತೇನೆ ಎಂದು ಹಿಂದೊಮ್ಮೆ ಕಂಗನಾ ಟ್ವೀಟ್ ಮಾಡಿದ್ದರು ಎಂಬುದಾಗಿ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಹೇಳಿದ್ದರು.

ಇತ್ತೀಚೆಗೆ, ಬಿಜೆಪಿ ಪಕ್ಷ ಸೇರಿರುವ ಕಂಗನಾ ಅವರನ್ನು ಹಿಮಾಚಲ ಪ್ರದೇಶ ಮಂಡಿ ಲೋಕಸಭಾ ಕ್ಷೇತ್ರದಿಂದ ಪಕ್ಷ ಕಣಕ್ಕಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT