ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೆಲ್ಲರಿಂದ ಸ್ಫೂರ್ತಿ ಪಡೆಯುತ್ತೇನೆ: ಪ್ಯಾರಾ ಅಥ್ಲೀಟ್‌ಗಳೊಂದಿಗೆ ಮೋದಿ ಸಂವಾದ

Last Updated 12 ಸೆಪ್ಟೆಂಬರ್ 2021, 9:47 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಅಥ್ಲೀಟ್‌ಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ಯಾರಾ ಅಥ್ಲೀಟ್‌ಗಳ ಪ್ರದರ್ಶನದಿಂದ ತಾವು ಪ್ರೇರಣೆ ಪಡೆದಿರುವುದಾಗಿಯೂ ಹೇಳಿದ್ದಾರೆ.

ಟೋಕಿಯೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಐದು ಚಿನ್ನ ಸಹಿತ ಒಟ್ಟು 19 ಪದಕಗಳನ್ನು ಜಯಿಸಿದ್ದಾರೆ. ಪದಕ ವಿಜೇತರಿಗೆ ಪ್ರಧಾನಿ ಮೋದಿ ಗುರುವಾರ ಭೋಜನ ಕೂಟ ಏರ್ಪಡಿಸಿದ್ದರು. ಆ ವೇಳೆ ನಡೆಸಿದ ಸಂವಾದದ ವಿಡಿಯೊವನ್ನು‌ ಮೋದಿ ತಮ್ಮ ಟ್ವಿಟರ್‌ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಂವಾದದ ವೇಳೆ ಮೋದಿ, ಪ್ಯಾರಾ ಅಥ್ಲೀಟ್‌ಗಳು ದೇಶಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಿದೆ. ಅಷ್ಟಲ್ಲದೆ ಕ್ರೀಡಾ ಕ್ಷೇತ್ರದ ಹೊರಗೂ ಬದಲಾವಣೆಗಾಗಿ ಪಾತ್ರ ವಹಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ʼನಾನು ನಿಮ್ಮಿಂದ ಪ್ರೇರಣೆ, ಸ್ಪೂರ್ತಿಯನ್ನು ಪಡೆಯುತ್ತೇನೆ. ನಿಮ್ಮ ಸಾಧನೆಯ ಮೂಲಕ ಸೋಗಲಾಡಿ ಮನಸ್ಥಿತಿಗಳನ್ನು ಮಣಿಸಿದ್ದೀರಿ. ಇದು ದೊಡ್ಡ ವಿಚಾರʼ ಎಂದಿದ್ದಾರೆ.

ʼನೀವು ಸಣ್ಣ ವಿಚಾರಗಳ ಮೂಲಕವೂ ದೇಶವನ್ನು ಹೆಚ್ಚಾಗಿ ಪ್ರೇರೇಪಿಸಬಹುದು. ನೀವು ಶಾಲೆಗಳಿಗೆ, ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಬಹುದು. ಕ್ರೀಡಾ ಪ್ರಪಂಚದ ಹೊರತಾಗಿಯೂ ದೇಶಕ್ಕಾಗಿ ಬೇರೆ ಏನನ್ನಾದರೂ ಮಾಡಬಹುದು. ಬದಲಾವಣೆಯನ್ನು ತರಲು ನೆರವು ನೀಡಬಹುದುʼ ಎಂದು ಸಲಹೆ ನೀಡಿದ್ದಾರೆ.

ʼದೇಶಕ್ಕಾಗಿ ಸಾಕಷ್ಟು ಮಾಡಬೇಕಿದೆ. ಭವಿಷ್ಯವು ಉಜ್ವಲವಾಗಿದೆ. ನಾನು ಯಾವಾಗಲು ನಿಮ್ಮನ್ನು ಬೆಂಬಲಿಸುತ್ತೇನೆ. ನಿಮ್ಮ ಕನಸುಗಳು ನನ್ನವೂ ಆಗಿವೆ. ಅವುಗಳನ್ನು ನನಸಾಗಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇನೆʼ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT