ಪಾಲ್ಗರ್ (ಮಹಾರಾಷ್ಟ್ರ): ಇಲ್ಲಿನ ವಿರಾರ್ ಪಟ್ಟಣದಲ್ಲಿ ಅನಧಿಕೃತ ನಾಲ್ಕು ಮಹಡಿಗಳ ಕಟ್ಟಡದ ಹಿಂಭಾಗ ಕುಸಿದು, ಪಕ್ಕದಲ್ಲಿದ್ದ ಕಟ್ಟಡದ ಮೇಲೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಗಳವಾರ ತಡ ರಾತ್ರಿ 12.05ರ ಸುಮಾರಿಗೆ 'ರಮಾಬಾಯಿ ಅಪಾರ್ಟ್ಮೆಂಟ್' ಹಿಂಭಾಗ ಕುಸಿದು ಬಿತ್ತು. ಘಟನೆ ಬಳಿಕ ಆಗಮಿಸಿದ ಎನ್ಡಿಆರ್ಎಫ್ ತಂಡ 18 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೂರು ಶವಗಳನ್ನು ಹೊರತೆಗೆಯಿತು. ಐವರನ್ನು ರಕ್ಷಣೆ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ರಮಾಬಾಯಿ ಅಪಾರ್ಟ್ಮೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

2012ರಲ್ಲಿ ನಿರ್ಮಿಸಲಾದ ಈ ಅಪಾರ್ಟ್ಮೆಂಟ್ನಲ್ಲಿ 50 ಫ್ಲಾಟ್ಗಳಿದ್ದು, ಕುಸಿದ ಭಾಗದಲ್ಲಿ 12 ಮನೆಗಳಿದ್ದವು ಎಂದು ಎನ್ಡಿಆರ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಹಾಗೂ ಮುಂಬೈನ ಹೊರವಲಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕಟ್ಟಡವು ಅನಧಿಕೃತವಾಗಿತ್ತು ಎಂದು ವಿರಾರ್ ಮಹಾನಗರ ಪಾಲಿಕೆಯ ವಕ್ತಾರರು ದೃಢಪಡಿಸಿದ್ದಾರೆ. ಜಿಲ್ಲಾಧಿಕಾರಿ ರಾಣಿ ಜಾಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.