ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಬಿಆರ್‌ಎಸ್‌ ಸಂಸದ, ಶಾಸಕರ ಸಂಸ್ಥೆಗಳಲ್ಲಿ ಐಟಿ ಶೋಧ

Published 14 ಜೂನ್ 2023, 15:42 IST
Last Updated 14 ಜೂನ್ 2023, 15:42 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್‌ ಶಾಸಕರಾದ ಪಿ.ಶೇಖರ್ ರೆಡ್ಡಿ, ಎಂ.ಜನಾರ್ದನ ರೆಡ್ಡಿ ಹಾಗೂ ಸಂಸದ ಕೆ.ಪ್ರಭಾಕರ ರೆಡ್ಡಿ ಅವರಿಗೆ ಸೇರಿದ ವಿವಿಧ ಸಂಸ್ಥೆಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧ ನಡೆಸಿದ್ದು, ಶಾಸಕರು–ಸಂಸದರ ತೆರಿಗೆ ಪಾವತಿ ಬಗ್ಗೆ ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಗರಕರ್ನೂಲ್‌ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಜನಾರ್ದನರೆಡ್ಡಿ ಅವರಿಗೆ ಸೇರಿದ ಶಾಪಿಂಗ್ ಮಾಲ್‌ನಲ್ಲೂ ಶೋಧ ನಡೆದಿದೆ. ಶೇಖರ್ ರೆಡ್ಡಿ ಭೋಂಗಿರ್ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದರೆ, ಪ್ರಭಾಕರ್ ರೆಡ್ಡಿ ಮೇದಕ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸಲಿದ್ದಾರೆ.

‘ರಾಜಕೀಯ ಪ್ರೇರಿತ ದಾಳಿಯಿದು. ಬಿಆರ್‌ಎಸ್‌ ವರ್ಚಸ್ಸು ಕುಂದಿಸಲು ಚುನಾವಣೆಗೂ ಮೊದಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಶೋಧ ನಡೆಸಲಾಗುತ್ತಿದೆ. ನಮ್ಮ ಎಲ್ಲಾ ವ್ಯವಹಾರಗಳು ಮುಕ್ತ ಮತ್ತು ಸ್ವಚ್ಛವಾಗಿವೆ’ ಎಂದು ಮೇದಕ್ ಸಂಸದ ಪ್ರಭಾಕರ ರೆಡ್ಡಿ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT