ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ದಾಳಿ: ₹50 ಕೋಟಿ ನೋಟು ಲೆಕ್ಕ ಮಾಡುವಷ್ಟರಲ್ಲಿ ‘ಸುಸ್ತಾಗಿ’ ನಿಂತ ಯಂತ್ರಗಳು

Published 7 ಡಿಸೆಂಬರ್ 2023, 6:32 IST
Last Updated 7 ಡಿಸೆಂಬರ್ 2023, 6:32 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌(ಬಿಡಿಪಿಎಲ್) ಸಂಸ್ಥೆಗೆ ಸೇರಿದ ಸ್ಥಳಗಳ ಮೇಲೆ ಆದಾಯ ತೆರಿಗೆ (ಐ-ಟಿ) ಇಲಾಖೆಯು ದಾಳಿ ನಡೆಸಿದ್ದು, ನಿನ್ನೆಯವರೆಗೆ ಕಂಪನಿಗೆ ಸಂಬಂಧಿಸಿದ ಸ್ಥಳಗಳಿಂದ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದೆ.

ಅಧಿಕಾರಿಗಳ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್‌ಪುರ ಹಾಗೂ ಜಾರ್ಖಂಡ್‌ನ ರಾಂಚಿ, ಲೋಹರ್ದಗಾದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ನಿನ್ನೆಯವರೆಗೆ ₹50 ಕೋಟಿ ನೋಟುಗಳ ಎಣಿಕೆ ಪೂರ್ಣಗೊಂಡಿದೆ ಆದರೆ, ಎಣಿಕೆ ಮಾಡಬೇಕಾದ ನೋಟಿನ ಕಂತೆಗಳ ಸಂಖ್ಯೆ ಬಹಳಷ್ಟು ಹೆಚ್ಚಿದ್ದು, ಎಣಿಕೆ ಯಂತ್ರಗಳು ಕೈಕೊಟ್ಟಿದ್ದರಿಂದ ಎಣಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಬಿಡಿಪಿಎಲ್ ಸಂಸ್ಥೆಯು ರಾಜ್ಯಸಭಾ ಸದಸ್ಯ ಧೀರಜ್ ಸಾಹು ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದೆ. ಬುಧವಾರ ಬೆಳಿಗ್ಗೆಯಿಂದ ಈ ದಾಳಿ ನಡೆಯುತ್ತಿದ್ದು, ಒಡಿಶಾದ 4 ಮತ್ತು ಜಾರ್ಖಂಡ್‌ನ ಎರಡು ಪ್ರದೇಶಗಳಲ್ಲಿ ಶೋಧ ನಡೆಯುತ್ತಿದೆ.

ಒಡಿಶಾದ ರೈದಿಹ್, ಸಂಬಲ್ಪುರ್ ಮತ್ತು ಬಲಂಗಿರ್ ಜಿಲ್ಲೆಗಳಲ್ಲಿರುವ ದಾಳಿ ನಡೆಯುತ್ತಿರುವ ಸ್ಥಳಗಳು ಬಿಡಿಪಿಎಲ್‌ನ ನಿರ್ದೇಶಕರು ಮತ್ತು ಕಂಪನಿಗೆ ಸೇರಿದ್ದಾಗಿವೆ.

ಕಂಪನಿಯು ತನ್ನ ನೈಜ ವ್ಯವಹಾರ ಚಟುವಟಿಕೆಗಳನ್ನು ಮರೆಮಾಚುವ ಮೂಲಕ ತೆರಿಗೆ ವಂಚಿಸಿದೆ ಎಂಬ ಮಾಹಿತಿಯ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT