ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅರ್ಥವ್ಯವಸ್ಥೆ ಕುರಿತು ಆತಂಕಬೇಡ-ಸಚಿವ ಜಾವಡೇಕರ್

Last Updated 8 ಸೆಪ್ಟೆಂಬರ್ 2019, 13:24 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಆರ್ಥ ವ್ಯವಸ್ಥೆಯಸದ್ಯದ ಸ್ಥಿತಿ ಕುರಿತು ಯಾವುದೇ ಅತಂಕ ಬೇಡ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ.

ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು 100 ದಿನಗಳಾದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಹಿಂಜರಿತ, ಕುಸಿಯುತ್ತಿರುವ ಜಿಡಿಪಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಭಾರತದ ಅರ್ಥವ್ಯವಸ್ಥೆ ಶಕ್ತಿಯುತವಾಗಿದ್ದು ಯಾವುದೇ ಆತಂಕವಿಲ್ಲ,ಅರ್ಥ ವ್ಯವಸ್ಥೆಯ ಕುರಿತು ಭಾರತ ದೃಢವಾದ ಹೆಜ್ಜೆ ಇರಿಸಿದ್ದು, 2024ರ ವೇಳೆಗೆ 5ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯಗುರಿ ಹೊಂದಿದ್ದೇವೆ. ಈ ಗುರಿ ಮುಟ್ಟುತ್ತೇವೆ. ಇಂತಹ ಆರ್ಥಿಕ ಹಿಂಜರಿತ ತಾತ್ಕಾಲಿಕ, ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.

ವಿಶ್ವದ ಆರ್ಥಿಕ ಹಿಂಜರಿತದೇಶದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದನ್ನು ಸರಿಪಡಿಸಲು ಸರ್ಕಾರದ ನಿಯಮಗಳಲ್ಲಿ ಹಲವು ಬದಲಾವಣೆ ತರಲಾಗಿದೆ. ಆಮೂಲಕ ಅರ್ಥ ವ್ಯವಸ್ಥೆಯನ್ನುಸರಿಪಡಿಸುವ ಪ್ರಯತ್ನ ನಡೆದಿದೆ. ಇದರಿಂದ ಮುಂಬರುವ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾಣಬಹುದು ಎಂದರು.
ಕಳೆದ ವಾರ ಜಿಡಿಪಿ ಬಿಡುಗಡೆಯಾಗಿದ್ದು, ಶೇ. 5ಕ್ಕೆ ತಲುಪಿದೆ. ಇದು ಕಳೆದ 6 ವರ್ಷಗಳಷ್ಟು ಹಿಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT