ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ವ ಲಡಾಖ್‌: ಸಶಸ್ತ್ರ ಪಡೆಗಳಿಂದ ತಾಲೀಮು ಆರಂಭ

Published 8 ಆಗಸ್ಟ್ 2024, 16:27 IST
Last Updated 8 ಆಗಸ್ಟ್ 2024, 16:27 IST
ಅಕ್ಷರ ಗಾತ್ರ

ಶ್ರೀನಗರ: ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಸಶಸ್ತ್ರ ಪಡೆಗಳು ಭಾರಿ ತಾಲೀಮು ಅರಂಭಿಸಿವೆ.

ಗಡಿ ವಿಚಾರವಾಗಿ ಚೀನಾದೊಂದಿಗಿನ ಸಂಘರ್ಷ ಮುಂದುವರಿದಿರುವ ನಡುವೆಯೇ ಭಾರತ ಸಶಸ್ತ್ರ ಪಡೆಗಳ ಅಭ್ಯಾಸಕ್ಕೆ ಚಾಲನೆ ನೀಡಿದೆ.

ಸೇನೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶೀಘ್ರವೇ ಗಡಿಗೆ ಭೇಟಿ ನೀಡಿ, ಸಶಸ್ತ್ರ ಪಡೆಗಳ ತಾಲೀಮು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

‘ಸಶಸ್ತ್ರ ಪಡೆಗಳ ಯುದ್ಧ ಸನ್ನದ್ಧತೆ ಹಾಗೂ ಯೋಧರ ನೈತಿಕ ಸ್ಥೈರ್ಯ ಹೆಚ್ಚಿಸುವುದು ಈ ಅಭ್ಯಾಸಗಳ ಉದ್ದೇಶವಾಗಿದೆ. ನೆರೆ ದೇಶದೊಂದಿಗಿನ ಸಂಘರ್ಷದ ಗಂಭೀರತೆ ಹಾಗೂ ಯುದ್ಧತಂತ್ರದ ಭಾಗವಾಗಿ ಈ ಪ್ರದೇಶದ ಮಹತ್ವವನ್ನು ಪರಿಗಣಿಸಿ ಸೇನೆಯು ಪೂರ್ವ ಲಡಾಖ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗಣನೀಯ ಸಂಖ್ಯೆಯ ಯೋಧರನ್ನು ನಿಯೋಜಿಸಿದೆ’ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿ ಸೇರಿದಂತೆ ಹಲವು ಸಂಕೀರ್ಣ ಕಾರ್ಯಾಚರಣೆಗಳನ್ನು ಈ ಸಮರಾಭ್ಯಾಸ ಒಳಗೊಂಡಿದೆ ಎಂದೂ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT