ಇಸ್ಲಾಮಾಬಾದ್: ಇಸ್ಲಾಮಾಬಾದ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಆರೋಪವನ್ನು ಭಾರತ ತಳ್ಳಿ ಹಾಕಿದೆ.

'ಇದು ತಪ್ಪು ಹಾಗೂ ಆಧಾರರಹಿತ ಆರೋಪವಾಗಿದ್ದು, 'ಭ್ರಮನಿರಸನ' ಹೊಂದಿದ ನಾಯಕತ್ವದ ಸುಳ್ಳು ನಿರೂಪಣೆಯಾಗಿದೆ' ಎಂದು ತಿರುಗೇಟು ನೀಡಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಹೊರಗೆ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ 'ಭಾರತ ಬೆಂಬಲಿತ ಸಕ್ರಿಯ ಗುಂಪುಗಳು' ದಾಳಿಯಲ್ಲಿ ಭಾಗಿಯಾಗಿವೆ ಎಂದು ಪಾಕ್ ಪ್ರಧಾನಿ ಆರೋಪಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಅಂತರರಾಷ್ಟ್ರೀಯ ಸಮುದಾಯಕ್ಕೆ ನಿಜ ಸ್ಥಿತಿ ಕುರಿತು ಚೆನ್ನಾಗಿ ಗೊತ್ತಿದೆ. ಪಾಕ್ನ ಇಂತಹ 'ಹತಾಶ' ತಂತ್ರಗಾರಿಕೆಯಿಂದ ದಾರಿ ತಪ್ಪುವುದಿಲ್ಲ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

'ಭಾವೋದ್ರೇಕಕ್ಕೊಳಗಾದ ಪಾಕಿಸ್ತಾನ ನಾಯಕತ್ವದ ತಪ್ಪು ಹಾಗೂ ಆಧಾರರಹಿತ ಆರೋಪಗಳನ್ನು ಭಾರತ ನಿರಾಕರಿಸುತ್ತದೆ' ಎಂದು ಅವರು ಹೇಳಿದ್ದಾರೆ.

'ಪಾಕಿಸ್ತಾನದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಮಿಲಿಟರಿ ಪ್ರಚೋದಿತ ಸಾಂವಿಧಾನಿಕ ವಿರೋಧಿ ಕೃತ್ಯ ಹಾಗೂ ಅಧಿಕಾರ ವಿಕೇಂದ್ರೀಕರಣ ವಿರುದ್ಧ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ' ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರ ಹೊಸ ಹುದ್ದೆಯನ್ನು ರಚಿಸಲು ಸಾಂವಿಧಾನಿಕ ತಿದ್ದುಪಡಿಯ ನಂತರ ಶರೀಫ್ ಸರ್ಕಾರವು ಅಲ್ಲಿನ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿವೆ.
.ಪಾಕಿಸ್ತಾನ | ನ್ಯಾಯಾಲಯದ ಬಳಿ ಆತ್ಮಾಹುತಿ ಬಾಂಬ್ ದಾಳಿ: 12 ಜನ ಸಾವು.'ವೈಟ್ಕಾಲರ್ ಭಯೋತ್ಪಾದನೆ': ಶಿಕ್ಷಿತ ವೃತ್ತಿಪರರ ಬಳಸಿ ಉಗ್ರ ಕೃತ್ಯಕ್ಕೆ ಪಿತೂರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.