ನವದೆಹಲಿ: ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕ್ನಲ್ಲಿ ಹಣವಿಟ್ಟಿರುವ ಭಾರತೀಯರ ಮೊದಲಪಟ್ಟಿ ದೇಶಕ್ಕೆ ಲಭ್ಯವಾಗಿದೆ.

ಕಪ್ಪು ಹಣವನ್ನು ಪತ್ತೆ ಹಚ್ಚುವ ಭಾರತದ ಪ್ರಯತ್ನದಲ್ಲಿ ಈ ಬೆಳವಣಿಗೆ ಮೈಲುಗಲ್ಲು ಎಂದೇ ಹೇಳಲಾಗುತ್ತಿದೆ.ಭಾರತ ಮತ್ತು ಸ್ವಿಜರ್ಲೆಂಡ್ದೇಶಗಳ ನಡುವೆ ಏರ್ಪಟ್ಟಿರುವ ಮಾಹಿತಿ ಹಂಚಿಕೆ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ತನ್ನ ನಾಗರಿಕರ ಬ್ಯಾಂಕ್ ಖಾತೆಗಳ ವಿವರ ದೊರೆತಿದೆ.

ಸ್ವಿಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರ ವಿವರ ನೀಡುವಂತೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಸ್ವಿಜರ್ಲೆಂಡ್ ಸರ್ಕಾರವನ್ನು ಒತ್ತಾಯಿಸುತ್ತಿದ್ದವು. ಇದಕ್ಕೆ ಮಣಿದ ಸ್ವಿಸ್ ಸರ್ಕಾರ ಖಾತೆದಾರರ ಗೌಪ್ಯತೆ ಬಗ್ಗೆ ಇದ್ದ ನಿಯಮ ಸಡಿಲಿಸಿದೆ. ಈಗ ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಇರಿಸುವವರ ಮಾಹಿತಿಯನ್ನು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ಹಂಚಿಕೊಳ್ಳಲು ಸ್ವಯಂಚಾಲಿತ ಮಾಹಿತಿ ವಿನಿಮಯ (ಎಇಒಐ) ವ್ಯವಸ್ಥೆ ಜಾರಿ ಮಾಡಿದೆ. ಅದರಂತೆ, ಸ್ವಿಜರ್ಲೆಂಡ್ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್ಟಿಎ) 75 ರಾಷ್ಟ್ರಗಳ3.1 ಮಿಲಿಯನ್ ಖಾತೆದಾರರ ಮಾಹಿತಿಯನ್ನು ಆಯಾ ದೇಶಗಳೊಂದಿಗೆ ವಿನಿಮಯ ಮಾಡಿಕೊಂಡಿದೆ. ಅದರಲ್ಲಿ ಭಾರತವೂ ಒಂದು.

ಈ ಮಾನದಂಡದ ಅಡಿಯಲ್ಲಿ ಭಾರತಕ್ಕೆ ತನ್ನ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಕುರಿತ ಮೊದಲ ಪಟ್ಟಿ ಲಭ್ಯವಾಗಿದೆ. ಸದ್ಯ ಸಕ್ರೀಯವಾಗಿರುವ ಖಾತೆಗಳು ಮತ್ತು 2018ರಲ್ಲಿ ರದ್ದಾದ ಖಾತೆಗಳ ಮಾಹಿತಿಗಳೂ ಲಭ್ಯವಾಗಲಿವೆ.

ಮುಂದಿನ ಮಾಹಿತಿ ವಿನಿಮಯ ಪ್ರಕ್ರಿಯೆಯು 2020ರ ಸೆಪ್ಟೆಂಬರ್ನಲ್ಲಿ ನಡೆಯಲಿದೆ ಎಂದು ಸ್ವಿಜರ್ಲೆಂಡ್ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ವಕ್ತಾರರು ತಿಳಿಸಿದ್ದಾರೆ.

ಸದ್ಯ ಹಂಚಿಕೊಳ್ಳಲಾಗಿರುವ ಮಾಹಿತಿಯನ್ನು ಅತ್ಯಂತ ಗೌಪ್ಯವಾದ ವಿಷಯ ಎಂದುಪರಿಗಣಿಸಲಾಗಿದ್ದು, ನಿರ್ದಿಷ್ಟ ಹೆಸರುಗಳನ್ನು ಬಹಿರಂಗಪಡಿಸಲು ಎಫ್ಟಿಎ ನಿರಾಕರಿಸಿದೆ.ಖಾತೆದಾರರ ಹೆಸರು, ವಿಳಾಸ, ಖಾತೆಯಲ್ಲಿ ಬಾಕಿ ಉಳಿದಿರುವ ಹಣ, ಹಣಕಾಸು ಸಂಸ್ಥೆಯ ಹೆಸರುಇತ್ಯಾದಿಗಳನ್ನು ಆಯಾ ದೇಶಗಳಿಗೆ ನೀಡಲಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.