ಶಿಲ್ಲಾಂಗ್:ಈಶಾನ್ಯ ಭಾರತವನ್ನು ವೇಗದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ʼಈಶಾನ್ಯ ಮಂಡಳಿʼಗೆ ಸಲಹೆ ನೀಡಿದ್ದಾರೆ.

ʼಈಶಾನ್ಯ ಪ್ರಾಂತ್ಯದ ಅಭಿವೃದ್ಧಿಯಲ್ಲಿ ಈಶಾನ್ಯ ಮಂಡಳಿಯ ಪಾತ್ರʼ ಕುರಿತಂತೆ ಶಿಲ್ಲಾಂಗ್‌ನಲ್ಲಿ ನಡೆದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು,ವಿವಿಧ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಮತೋಲನ ಸಾಧ್ಯವಾಗದಿದ್ದರೆ ಭಾರತದ ಅಭಿವೃದ್ಧಿಯು ಪರಿಪೂರ್ಣವಾಗದುʼ ಎಂದು ತಿಳಿಸಿದ್ದಾರೆ.

ʼಈಶಾನ್ಯ ಪ್ರಾಂತ್ಯವು ಪ್ರಗತಿ ಹೊಂದಿದರೆ, ಭಾರತವೂ ಪ್ರಗತಿ ಸಾಧಿಸುತ್ತದೆ. ಈ ಪ್ರದೇಶ ಹಿಂದುಳಿದರೆ ದೇಶವೂ ಹಿಂದುಳಿಯುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು,ʼದೇಶವು ಟೀಂ ಇಂಡಿಯಾವಾಗಿ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ವಿಚಾರಗಳಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಪರಿಹಾರಗಳನ್ನು ಕಂಡುಕೊಳ್ಳಬೇಕುʼ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.