ನವದೆಹಲಿ: ಭಾರತ– ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿ, ಕದನ ವಿರಾಮ ಜಾರಿಗೆ ತರಲು ತಾನೇ ಕಾರಣ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 25ನೇ ಬಾರಿ ಪುನರಾವರ್ತಿಸಿರುವುದನ್ನು ಗಮನಿಸಿದರೆ ಹಲವು ಸಂಶಯಗಳು ಮೂಡುತ್ತವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

‘ಕದನ ವಿರಾಮ ತರಲು ಟ್ರಂಪ್ ಯಾರು? ಅದು ಅವರ ಕೆಲಸವಲ್ಲ’ ಎಂದ ಅವರು, ‘ಈ ಬಗ್ಗೆ ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ ಅವರೇಕೆ ಉತ್ತರ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಟ್ರಂಪ್ ಅವರ ಹೇಳಿಕೆಯನ್ನು ಗಮನಿಸಿದರೆ ಅವರೇ ಕದನ ವಿರಾಮ ಜಾರಿಗೆ ತಂದಂತಿದೆ. ಅದೀಗ ಜಗತ್ತಿಗೆ ತಿಳಿದಿದೆ. ಆದರೆ ಅದನ್ನು ನಮ್ಮ ಪ್ರಧಾನಿ ಹೇಳುತ್ತಾರೆಯೇ? ಅವರು ಅದನ್ನು ಹಾಗೆ ಹೇಳಲು ಸಾಧ್ಯವಿಲ್ಲ. ಆದರೆ ಅದೇ ಸತ್ಯ’ ಎಂದು ರಾಹುಲ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ನಾವು ಕದನ ವಿರಾಮದ ಜತೆಗೆ ಇತರ ದೊಡ್ಡ ಸಮಸ್ಯೆಗಳನ್ನೂ ಚರ್ಚಿಸಲು ಬಯಸಿದ್ದೇವೆ. ಭದ್ರತೆ, ರಕ್ಷಣಾ ಉದ್ಯಮ, ಆಪರೇಷನ್ ಸಿಂಧೂರದ ಬಗ್ಗೆ ಚರ್ಚೆ ನಡೆಸಬೇಕಿದೆ. ಆದರೆ, ದೇಶಭಕ್ತ ಎನಿಸಿಕೊಳ್ಳುವವರು ಓಡಿಹೋಗಿದ್ದಾರೆ. ಇದರ ಬಗ್ಗೆ ಒಂದು ಹೇಳಿಕೆಯನ್ನೂ ನೀಡಲು ಪ್ರಧಾನಿ ಅವರಿಂದ ಇಲ್ಲಿಯವರೆಗೂ ಸಾಧ್ಯವಾಗಿಲ್ಲ’ ಎಂದು ಅವರು ಕಿಡಿಕಾರಿದರು.

ಮೋದಿ ಅವರು ವಿದೇಶದಿಂದ ಹಿಂದಿರುಗಿದ ಬಳಿಕ ಆಪರೇಷನ್ ಸಿಂಧೂರ್ ಬಗ್ಗ ಚರ್ಚೆ ನಡೆಸಲು ಸರ್ಕಾರ ಸಮ್ಮತಿಸಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
.ನನ್ನ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ಪರಮಾಣು ಯುದ್ಧ ತಪ್ಪಿತು: ಡೊನಾಲ್ಡ್ ಟ್ರಂಪ್.
‘ಒಂದೆಡೆ ಆಪರೇಷನ್ ಸಿಂಧೂರ ಮುಂದುವರಿದಿದೆ ಎಂದು ಸರ್ಕಾರ ಹೇಳುತ್ತಿದೆ, ಇನ್ನೊಂದೆಡೆ ಈ ಕಾರ್ಯಾಚರಣೆಯಲ್ಲಿ ಈಗಾಗಲೇ ಜಯ ಸಾಧಿಸಲಾಗಿದೆ ಎಂದೂ ಪ್ರತಿಪಾದಿಸಲಾಗುತ್ತಿದೆ. ಗೆಲುವು ಸಾಧಿಸಲಾಗಿದೆಯೋ ಅಥವಾ ಕಾರ್ಯಾಚರಣೆ ಮುಂದುವರಿದಿದೆಯೋ ಎಂಬುದು ಸ್ಪಷ್ಟವಾಗಬೇಕು. ಅಲ್ಲದೆ, ಟ್ರಂಪ್ ಅವರು ಸಿಂಧೂರ ಕಾರ್ಯಾಚರಣೆಯನ್ನು ತಾನೇ ಸ್ಥಗಿತಗೊಳಿಸಿದ್ದಾಗಿಯೂ ಹೇಳುತ್ತಿದ್ದಾರೆ. ಇದನ್ನು ಅವರು 25 ಬಾರಿ ಹೇಳಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಹಲವು ಸಂಶಯಗಳಿವೆ’ ಎಂದು ಅವರು ಹೇಳಿದರು.

ಆಪರೇಷನ್ ಸಿಂಧೂರದ ಬಳಿಕ ವಿದೇಶಗಳಿಗೆ ಭಾರತ ಕಳುಹಿಸಿದ್ದ ಸಂಸದರ ನಿಯೋಗದ ಬಗ್ಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ ಕೇಂದ್ರ ಸರ್ಕಾರವು ನಮ್ಮ ವಿದೇಶಾಂಗ ನೀತಿಯನ್ನು ನಾಶಪಡಿಸಿದೆ. ಈ ವೇಳೆ ಯಾರೂ ನಮಗೆ ಬೆಂಬಲ ನೀಡಿಲ್ಲ’ ಎಂದರು.

ಭಾರತ– ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸುದ್ದು ತಾನೇ ಎಂದು ಟ್ರಂಪ್ ಅವರು 73 ದಿನಗಳಲ್ಲಿ 25 ಬಾರಿ ಹೇಳಿಕೆ ನೀಡಿದ್ದಾರೆ. ಆದರೆ ಭಾರತದ ಪ್ರಧಾನಿ ಮೌನಕ್ಕೆ ಜಾರಿದ್ದು ವಿದೇಶಿ ಪ್ರವಾಸದಲ್ಲಿ ತಲ್ಲೀನರಾಗಿದ್ದಾರೆ
– ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.