ನವದೆಹಲಿ: ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್ (ಇಐಯು) ಗುರುವಾರ ಪ್ರಕಟಿಸಿರುವ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ವ್ಯಕ್ತಿಗತ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತವು 10ನೇ ಸ್ಥಾನ ಪಡೆದಿದೆ.

ಆಸ್ಟ್ರೇಲಿಯಾ, ಚೀನಾ, ಜಪಾನ್, ಭಾರತ, ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರ, ದಕ್ಷಿಣ ಕೊರಿಯಾ, ತೈವಾನ್, ಥಾಯ್ಲೆಂಡ್ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿನ ಆರೋಗ್ಯ ವ್ಯವಸ್ಥೆಗಳನ್ನು ತುಲನೆ ಮಾಡಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

‘ವ್ಯಕ್ತಿಗತ ಆರೋಗ್ಯ ಸೂಚ್ಯಂಕವನ್ನು ನೀತಿ ನಿರೂಪರಣೆ, ಆರೋಗ್ಯ ಮಾಹಿತಿ, ವ್ಯಕ್ತಿಗತ ತಂತ್ರಜ್ಞಾನ ಹಾಗೂ ಆರೋಗ್ಯ ಸೇವೆ ಎಂದು ನಾಲ್ಕು ವಿಭಾಗಗಳನ್ನಾಗಿ ವರ್ಗೀಕರಿಸಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಆರೋಗ್ಯ ಮಾಹಿತಿ ಸೂಚ್ಯಂಕದಲ್ಲಿ ಭಾರತಕ್ಕೆ 41 ಅಂಕ ಲಭಿಸಿದ್ದು, ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ. ಆರೋಗ್ಯ ಸೇವೆ ಸೂಚ್ಯಂಕದಲ್ಲಿ ಭಾರತವು 24 ಅಂಕಗಳೊಂದಿಗೆ 11ನೇ ಸ್ಥಾನ ಗಳಿಸಿದೆ. ವ್ಯಕ್ತಿಗತ ತಂತ್ರಜ್ಞಾನ ಸೂಚಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ವಿಭಾಗದಲ್ಲಿ 30 ಅಂಕಗಳು ಲಭಿಸಿವೆ. ಪಾಲಿಸಿ ಕಂಟೆಕ್ಸ್ಟ್ (ನೀತಿ ನಿರೂಪಣೆ) ಸೂಚ್ಯಂಕದಲ್ಲಿ ಭಾರತವು 48 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದೆ.

ವ್ಯಕ್ತಿಗತ ಆರೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಸಿಂಗಪುರ ಮೊದಲ ಸ್ಥಾನ ಗಳಿಸಿದೆ. ಆರೋಗ್ಯ ಮಾಹಿತಿ ಹಾಗೂ ವ್ಯಕ್ತಿಗತ ತಂತ್ರಜ್ಞಾನ ವಿಭಾಗಗಳಲ್ಲೂ ಈ ರಾಷ್ಟ್ರ ಮುಂಚೂಣಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.