ನವದೆಹಲಿ: ಮುಂದಿನ ಆರರಿಂದ ಎಂಟು ತಿಂಗಳುಗಳಲ್ಲಿ ಕೋವಿಡ್–19 ಲಸಿಕೆಯ 60 ಕೋಟಿ ಡೋಸ್‌ಗಳನ್ನು ಸಂಗ್ರಹಿಸಿಡುವುದು ಮತ್ತು ಅಗತ್ಯವುಳ್ಳ ಜನರಿಗೆ ಅದನ್ನು ವಿತರಿಸಲು ಭಾರತ ಸಿದ್ಧತೆಗಳನ್ನು ಕೈಗೊಂಡಿದೆ.

ದೇಶದ ಬೃಹತ್ ಚುನಾವಣಾ ಕಾರ್ಯತಂತ್ರದ ವ್ಯವಸ್ಥೆಯನ್ನು ಬಳಸಿಕೊಂಡು ಲಸಿಕೆ ವಿತರಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಲಸಿಕೆ ವಿತರಣೆ ಪ್ರಕ್ರಿಯೆಯ ನೇತೃತ್ವ ವಹಿಸಿರುವ ತಜ್ಞರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್: ಫೈಜರ್–ಬಯೊಎನ್ಟೆಕ್ ಲಸಿಕೆ ತುರ್ತು ಬಳಕೆಗೆ ಅಮೆರಿಕ ಒಪ್ಪಿಗೆ

2ರಿಂದ 8 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನದ ಶೀಥಲೀಕರಣ ಘಟಕಗಳನ್ನು ಸರ್ಕಾರವು ಸಿದ್ಧಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋವಿಡ್–19 ಲಸಿಕೆಗೆ ಸಂಬಂಧಿಸಿದ ಆಡಳಿತಾತ್ಮಕ ವಿಷಯಗಳಲ್ಲಿ ಸಲಹೆ ನೀಡುವ ತಜ್ಞರ ತಂಡದ ನೇತೃತ್ವ ವಹಿಸಿರುವ ವಿ.ಕೆ.ಪೌಲ್ ತಿಳಿಸಿದ್ದಾರೆ.

ದೇಶದಲ್ಲಿ ಲಸಿಕೆ ಉತ್ಪಾದನೆ ವಿಚಾರದಲ್ಲಿ ಮುಂಚೂಣಿಯಲ್ಲಿರುವ ನಾಲ್ಕು ಸಂಸ್ಥೆಗಳು ಮಾಡಿರುವ ಮನವಿಯಲ್ಲಿರುವ ಅಂಶಗಳನ್ನು ಈ ಸಿದ್ಧತೆಗಳು ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ.

‘ಸೀರಮ್, ಭಾರತ್, ಝೈಡಸ್ ಹಾಗೂ ಸ್ಪುಟ್ನಿಕ್ ಲಸಿಕೆಗಳಿಗೆ ಸಾಮಾನ್ಯ ಶೀಥಲೀಕರಣ ವ್ಯವಸ್ಥೆ ಸಾಕಾಗುತ್ತದೆ. ಈ ಲಸಿಕೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಪೌಲ್ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈಗಾಗಲೇ ಆಸ್ಟ್ರಾಜೆನೆಕಾದ ‘ಕೋವಿಶೀಲ್ಡ್’ ಲಸಿಕೆಯ ಉತ್ಪಾದನೆ ಆರಂಭಿಸಿದೆ. ಭಾರತದ ‘ಭಾರತ್ ಬಯೋಟೆಕ್’ ಮತ್ತು ‘ಝೈಡಲ್ ಕ್ಯಾಡಿಲಾ’ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸುತ್ತಿವೆ.

ಇದನ್ನೂ ಓದಿ:Covid-19 India Update: ದೇಶದಲ್ಲಿ 145 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣ

ಭಾರತದಲ್ಲಿ ವರ್ಷಕ್ಕೆ 10 ಕೋಟಿ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಔಷಧ ತಯಾರಿಕಾ ಕಂಪನಿ ಹೆಟೆರೊ ಕಳೆದ ತಿಂಗಳು ರಷ್ಯಾದ ಆರ್‌ಡಿಐಎಫ್ ಜತೆ ಒಪ್ಪಂಡ ಮಾಡಿಕೊಂಡಿತ್ತು.

ಶೀಘ್ರದಲ್ಲೇ ಡಿಸಿಜಿಐಯಿಂದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ದೊರೆಯುವ ಬಗ್ಗೆ ಸರ್ಕಾರ ನಿರೀಕ್ಷೆಯಲ್ಲಿದೆ ಎಂದೂ ಪೌಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.