ನವದೆಹಲಿ: ಕೋವಿಡ್ ಲಸಿಕೆ ಹಾಗೂ ಔಷಧಗಳನ್ನು ಪೇಟೆಂಟ್ ಮುಕ್ತಗೊಳಿಸುವುದಕ್ಕಾಗಿ (ಹಕ್ಕುಸ್ವಾಮ್ಯ) ಚೀನಾ, ರಷ್ಯಾ, ಬ್ರೆಜಿಲ್ ದೇಶಗಳ ಬೆಂಬಲವನ್ನು ಭಾರತ ಕೋರಿದೆ.

ಈ ಸಂಬಂಧ ವಿಶ್ವವಾಣಿಜ್ಯ ಸಂಘಟನೆ (ಡಬ್ಲ್ಯೂಟಿಒ) ಎದುರು ಭಾರತ ಪ್ರಸ್ತಾವ ಇರಿಸಿದ್ದು, ಬೆಂಬಲ ನೀಡುವಂತೆ ಬ್ರಿಕ್ಸ್ ದೇಶಗಳನ್ನು ವಿನಂತಿಸಿಕೊಂಡಿದೆ. ಭಾರತದ ಈ ಮನವಿಗೆ ದಕ್ಷಿಣ ಆಫ್ರಿಕ ದನಿಗೂಡಿಸಿದೆ.

ಇದೇ ಶುಕ್ರವಾರ ವಿಶ್ವವಾಣಿಜ್ಯ ಸಂಘಟನೆಯ ಟಿಆರ್‌ಐಪಿಎಸ್ ಸಭೆಯಲ್ಲಿ (ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳು) ಭಾರತ ಮಂಡಿಸಿರುವ ಪ್ರಸ್ತಾವ ಚರ್ಚೆಗೆ ಬರುವ ಸಾಧ್ಯತೆಯಿದೆ. ಆದರೆ ಪ್ರಸ್ತಾವಕ್ಕೆ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಒಲವು ತೋರಿಲ್ಲ. ಚೀನಾ ಕೂಡ ತನ್ನ ಕಂಪನಿಗಳು ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಗಳ ಕ್ಲಿನಿಕಲ್ ಪ್ರಯೋಗ ಮತ್ತು ವಿತರಣೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಸಹಕಾರವನ್ನು ಪ್ರಸ್ತಾಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.