ಬಾಲೇಶ್ವರ, ಒಡಿಶಾ: ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಅಗ್ನಿ–5 ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಡಾ. ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಸ್ವದೇಶಿ ನಿರ್ಮಿತ ಕ್ಷಿಪಣಿಯು 5 ಸಾವಿರ ಕಿ.ಮೀ ದಾಳಿ ವ್ಯಾಪ್ತಿ ಹೊಂದಿದ್ದು, ಈ ಬಾರಿಯದ್ದು ಏಳನೇ ಪ್ರಾಯೋಗಿಕ ಪರೀಕ್ಷೆಯಾಗಿದೆ.

ಕ್ಷಿಪಣಿಯ ಎತ್ತರ 17 ಮೀಟರ್, ಅಗಲ 2 ಮೀಟರ್. 1.5 ಟನ್ ತೂಕದ ಪರಮಾಣು ಸಿಡಿತಲೆ ಹೊರುವ ಸಾಮರ್ಥ್ಯವಿದೆ. ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಅತ್ಯಾಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ.

ಭಾರತದ ಬತ್ತಳಿಕೆಯಲ್ಲಿ 700 ಕಿ.ಮೀ ದಾಳಿ ವ್ಯಾಪ್ತಿಯ ಅಗ್ನಿ–1 ಕ್ಷಿಪಣಿ; 2000 ಕಿ.ಮೀ.ನ ಅಗ್ನಿ–2; 2500 ಕಿ.ಮೀ. ದಾಳಿ ವ್ಯಾಪ್ತಿಯಅಗ್ನಿ 3 ಹಾಗೂ 4 ಕ್ಷಿಪಣಿಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.