ಹೆಚ್ಚುವರಿ ಸುಂಕದ ಆದೇಶ ರದ್ದು
ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಕಾರಣ ಭಾರತದ ಮೇಲೆ 2025ರ ಆಗಸ್ಟ್‌ನಲ್ಲಿ ವಿಧಿಸಿದ್ದ ಶೇ 25ರಷ್ಟು ಹೆಚ್ಚುವರಿ ಆಮದು ಸುಂಕದ ಆದೇಶವನ್ನು ರದ್ದುಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ‘ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಮಾಸ್ಕೊದಿಂದ ನೇರ ಅಥವಾ ಪರೋಕ್ಷವಾಗಿ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಬದ್ಧತೆ ವ್ಯಕ್ತಪಡಿಸಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.