ನವದೆಹಲಿ: ಕೆನಡಾದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಖಾಲಿಸ್ತಾನಿ ಸಿಖ್ ಉಗ್ರಗಾಮಿಗಳ ಚಟುವಟಿಕೆಗಳ ಬಗೆಗಿನ ಕಳವಳಗಳನ್ನು ಅವರು ಪರಿಹರಿಸಿದರೆ, ಕೆನಡಾ ಜೊತೆಗಿನ ಸಂಬಂಧಗಳನ್ನು ಮರುಸ್ಥಾಪಿಸಬಹುದು ಎಂದು ಭಾರತ ಆಶಿಸುತ್ತದೆ.

ಲಿಬರಲ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಕಾರ್ನೆ ಶೇ 86ರಷ್ಟು ಮತಗಳನ್ನು ಗಳಿಸಿ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 6ರಂದು ಟ್ರುಡೊ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದ್ದರಿಂದ ಹೊಸ ನಾಯಕನ ಆಯ್ಕೆ ನಡೆಯಿತು.

ಟ್ರುಡೊ ಅವರ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದರೂ, ಭಾರತ-ಕೆನಡಾ ಸಂಬಂಧಗಳನ್ನು ಸರಿಪಡಿಸುವ ಉದ್ದೇಶವನ್ನು ಕಾರ್ನೆ ಈಗಾಗಲೇ ವ್ಯಕ್ತಪಡಿಸಿದ್ದಾರೆ.

‘ಕೆನಡಾ ಸಮಾನ ಮನಸ್ಕ ದೇಶಗಳೊಂದಿಗೆ ನಮ್ಮ ವ್ಯಾಪಾರ ಸಂಬಂಧವನ್ನು ವೈವಿಧ್ಯಗೊಳಿಸಲು ಬಯಸುತ್ತದೆ’ಎಂದು ಕಾರ್ನೆ ಕಳೆದ ಮಂಗಳವಾರ ಹೇಳಿದ್ದರು.

‘ಭಾರತದೊಂದಿಗಿನ ಸಂಬಂಧವನ್ನು ಪುನರ್ನಿರ್ಮಿಸಲು ಅವಕಾಶಗಳಿವೆ. ವಾಣಿಜ್ಯ ಸಂಬಂಧದ ಸುತ್ತಲೂ ಮೌಲ್ಯಗಳ ಹಂಚಿಕೆಯ ಪ್ರಜ್ಞೆ ಇರಬೇಕು. ನಾನು ಪ್ರಧಾನಿಯಾದರೆ, ಅದನ್ನು ನಿರ್ಮಿಸುವ ಅವಕಾಶಕ್ಕಾಗಿ ಎದುರು ನೋಡುತ್ತೇನೆ’ಎಂದು ಹೇಳಿದ್ದರು.

ಎರಡೂ ರಾಷ್ಟ್ರಗಳ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಗಳಿಗಾಗಿ(ಸಿಇಪಿಎ)ಮಾತುಕತೆಗಳು 2010ರಲ್ಲಿ ಪ್ರಾರಂಭವಾದರೂ ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿವೆ.

ಟ್ರಂಪ್ ಅವರ ಕೆನಡಾ ವಿರುದ್ಧದ ವ್ಯಾಪಾರ ಯುದ್ಧಗಳ ಪರಿಣಾಮವನ್ನು ಕಡಿಮೆ ಮಾಡಲು ಭಾರತದೊಂದಿಗೆ ಸಂಬಂಧಗಳನ್ನು ಪುನಃಸ್ಥಾಪಿಸಲು ಮತ್ತು ಸಿಇಪಿಎಗಾಗಿ ಮಾತುಕತೆಗಳನ್ನು ಪುನರಾರಂಭಿಸಲು ಅವರು ಆಸಕ್ತಿ ಹೊಂದಿರಬಹುದು ಎಂದು ಲಿಬರಲ್ ನಾಯಕರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಕಾರ್ನೆ ನೀಡಿರುವ ಹೇಳಿಕೆಗಳು ಸೂಚಿಸುತ್ತವೆ.

ಭಾರತ-ಕೆನಡಾ ಸಂಬಂಧಗಳ ಕುರಿತು ಕಾರ್ನೆ ಅವರ ಮಾತುಗಳನ್ನು ಭಾರತ ಗಮನಿಸಿದೆ. ಕೆನಡಾದಲ್ಲಿ ಖಾಲಿಸ್ತಾನಿ ಸಿಖ್ ಉಗ್ರಗಾಮಿಗಳ ಚಟುವಟಿಕೆಗಳ ಬಗ್ಗೆ ಭಾರತದ ಕಳವಳಗಳನ್ನು ಪರಿಹರಿಸಿದರೆ ಮತ್ತು ಪರಾರಿಯಾಗಿರುವ ಭಯೋತ್ಪಾದಕರು ಮತ್ತು ಭೂಗತ ಪಾತಕಿಗಳನ್ನು ಹಸ್ತಾಂತರಿಸುವ ವಿನಂತಿಗಳನ್ನು ತ್ವರಿತವಾಗಿ ಅನುಮೋದಿಸಿದರೆ, ದ್ವಿಪಕ್ಷೀಯ ಸಂಬಂಧಗಳನ್ನು ಸರಿಪಡಿಸಲು ಕೆನಡಾ ಮಾಡುವ ಯಾವುದೇ ಪ್ರಸ್ತಾಪವನ್ನು ಭಾರತವು ಸ್ವಾಗತಿಸುತ್ತದೆ ಎಂದು ಮೂಲವೊಂದು ತಿಳಿಸಿದೆ.

ಕೆನಡಾದಲ್ಲಿ ಖಾಲಿಸ್ತಾನಿ ಸಿಖ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಟ್ರುಡೊ 2023ರಲ್ಲಿ ಆರೋಪಿಸಿದ ಬಳಿಕ ಭಾರತ ಮತ್ತು ಕೆನಡಾ ಸಂಬಂಧ ಹದಗೆಟ್ಟಿತ್ತು.
.ಟ್ರಂಪ್ ‘ವ್ಯಾಪಾರ ಸಮರ’ ಗೆಲ್ಲಲು ಕೆನಡಾದ ನೂತನ ಪ್ರಧಾನಿ ಕಾರ್ನೆ ಪ್ರತಿಜ್ಞೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.