ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್ತಿನಲ್ಲಿ 'ಜೈ ಸಂವಿಧಾನ' ಘೋಷಣೆ ಕೂಗಬಾರದೇ?: ಪ್ರಿಯಾಂಕಾ ಗಾಂಧಿ ವಾದ್ರಾ

Published 27 ಜೂನ್ 2024, 13:26 IST
Last Updated 27 ಜೂನ್ 2024, 13:26 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನಲ್ಲಿ 'ಜೈ ಸಂವಿಧಾನ' ಘೋಷಣೆ ಕೂಗಬಾರದೇ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನೆ ಮಾಡಿದ್ದಾರೆ.

'ಸಂಸತ್ತಿನಲ್ಲಿ ಆಡಳಿತ ಪಕ್ಷದ ಸಂಸದರು ಅಸಂವಿಧಾನಿಕ ಪದಗಳನ್ನು ಆಡಿದಾಗ ಅದನ್ನು ತಡೆಯಲಿಲ್ಲ. ಆದರೆ ವಿಪಕ್ಷಗಳ ಸಂಸದರು 'ಜೈ ಸಂವಿಧಾನ' ಎಂದು ಘೋಷಣೆ ಮೊಳಗಿಸಿದಾಗ ಆಕ್ಷೇಪ ವ್ಯಕ್ತವಾಯಿತು' ಎಂದು ಅವರು ಹೇಳಿದ್ದಾರೆ.

'ಚುನಾವಣೆಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಸಂವಿಧಾನದ ವಿರೋಧ ಈಗ ಹೊಸ ರೂಪವನ್ನು ಪಡೆದುಕೊಂಡಿದ್ದು, ನಮ್ಮ ಸಂವಿಧಾನವನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.

'ಇದೇ ಸಂವಿಧಾನದಿಂದ ಸಂಸತ್‌ನ ಕಾರ್ಯಕಲಾಪ ನಡೆಯುತ್ತದೆ, ಇದೇ ಸಂವಿಧಾನದಲ್ಲಿ ಸಂಸದರು ಪ್ರಮಾಣವಚನ ಸ್ವೀಕರಿಸುತ್ತಾರೆ, ಇದೇ ಸಂವಿಧಾನವು ದೇಶದ ಪ್ರಜೆಗಳಿಗೆ ಜೀವನ ಮತ್ತು ಜೀವನ ಭದ್ರತೆಯನ್ನು ಒದಗಿಸುತ್ತದೆ. ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಇದೇ ಸಂವಿಧಾನವನ್ನು ವಿರೋಧಿಸಲಾಗುತ್ತದೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT