ಮುಂಬೈ: ಇನ್ನು ಮುಂದೆ ರೈಲಿನಲ್ಲೂ ಎಟಿಎಂ ಮೂಲಕ ಹಣ ಪಡೆಯಬಹುದು. ಹೌದು, ಭಾರತೀಯ ರೈಲ್ವೆಯ 172ನೇ ವರ್ಷಾಚರಣೆಯ ಪ್ರಯುಕ್ತ ಪ್ರಾಯೋಗಿಕವಾಗಿ ರೈಲಿನೊಳಗೆ ಎಟಿಎಂ ಯಂತ್ರವನ್ನು ಸ್ಥಾಪಿಸಿದೆ.

ಮುಂಬೈ– ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಸ್ಥಾಪಿಸಲಾಗಿದೆ. ಈ ಉಪಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕೇಂದ್ರ ರೈಲ್ವೆಯ ಮುಂಬೈ ಪ್ರಧಾನ ಕಚೇರಿಯು ಭುಸವಾಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಸಂಯೋಜನೆಯಲ್ಲಿ ಎಟಿಎಂ ಅನ್ನು ಸ್ಥಾಪಿಸಿದೆ.

ರೈಲಿನಲ್ಲಿ ಎಟಿಎಂ ಯಂತ್ರವಿರುವ ವಿಡಿಯೊವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ರೈಲಿನಲ್ಲಿ ಮೊದಲ ಬಾರಿ ಎಟಿಎಂ ಸೌಲಭ್ಯ’ ಎಂದು ಬರೆದುಕೊಂಡಿದ್ದಾರೆ.

‘ಈ ಪ್ರಯೋಗ ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಂಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. 172 ವರ್ಷಗಳ ಹಿಂದೆ 1853ರಲ್ಲಿ 34 ಕಿ.ಮೀ ನಡುವೆ ಆರಂಭವಾದ ರೈಲು ಸಂಚಾರ ಇಂದು ಜಗತ್ತಿನ ಅತಿ ದೊಡ್ಡ ರೈಲು ಸಂಪರ್ಕ ಜಾಲವಾಗಿ ಬೆಳೆದಿದೆ. ಇದೇ ಹೆಮ್ಮೆಯೊಂದಿಗೆ ಭಾರತೀಯ ರೈಲ್ವೆ ಮುಂದೆ ಸಾಗಲಿದೆ’ ಎಂದು ಭಾರತೀಯ ರೈಲ್ವೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.