ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟ್ಟಿಗೆ ಸಮರಾಭ್ಯಾಸ ನಡೆಸಲಿವೆ ಭಾರತ–ಪಾಕ್‌ ಸೇನೆಗಳು

Last Updated 25 ಆಗಸ್ಟ್ 2018, 6:20 IST
ಅಕ್ಷರ ಗಾತ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಪರಸ್ಪರ ಗುಂಡಿನ ಕಾಳಗ ನಡೆಸುತ್ತಾ ಒಬ್ಬರನ್ನೊಬ್ಬರು ಹಿಮ್ಮೆಟ್ಟಿಸುತ್ತಿದ್ದ ಭಾರತ ಮತ್ತು ಪಾಕಿಸ್ತಾನ ಸೇನೆ ಯೋಧರು,ಶಾಂಘೈ ಸಹಕಾರ ಸಂಘದ(ಎಸ್‌ಸಿಒ) ವತಿಯಿಂದ ಇದೇ ಮೊದಲ ಬಾರಿಗೆ ಒಟ್ಟಿಗೆ ಸಮರಾಭ್ಯಾಸ ನಡೆಸಲಿದ್ದಾರೆ.

ಎಸ್‌ಸಿಒದಶಾಂತಿ ಮಿಷನ್‌–2018 ಅಡಿಯಲ್ಲಿರಷ್ಯಾದ ಚೆಬಾರ್ಕುಲ್‌ ಹಾಗೂ ಚೆಲ್ಯಾಬಿಸ್ಕ್‌ ಪ್ರದೇಶಗಳಲ್ಲಿಸಮರಾಭ್ಯಾಸ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಮಾತ್ರವಲ್ಲದೆ ಎಸ್‌ಸಿಒ ಸದಸ್ಯ ರಾಷ್ಟ್ರಗಳೂ ಇದರಲ್ಲಿ ಭಾಗವಹಿಸಲಿವೆ. ಈ ಕುರಿತು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

‘ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ಬೇರೆ ಬೇರೆ ದೇಶಗಳ ಯೋಧರೊಂದಿಗೆ ಜಂಟಿಯಾಗಿ ಸಮರಾಭ್ಯಾಸ ನಡೆಸುವ ವಿಶೇಷ ಅವಕಾಶವನ್ನು ಎಸ್‌ಸಿಒ ಒದಗಿಸುತ್ತಿದೆ. ಇದು ವೃತ್ತಿಪರ ಹೊಂದಾಣಿಕೆಯಾಗಲಿದ್ದು, ಜಂಟಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಕವಾಯತು ಹಾಗೂ ನಿಯಮಾವಳಿಗಳನ್ನು ಅರಿಯಲು ಸಹಕಾರಿಯಾಗಲಿದೆ. ಜೊತೆಗೆ ಉಗ್ರ ಬೆದರಿಕೆಗಳನ್ನು ನಿಗ್ರಹಿಸಲು ನೆರವಾಗಲಿದೆ’ ಎಂದುಸೇನೆಯ ವಕ್ತಾರ ಅಮನ್‌ ಆನಂದ್‌ ಹೇಳಿದ್ದಾರೆ.

‘ಈ ಹಿಂದೆ ವಿಶ್ವಸಂಸ್ಥೆಯ ಕಾರ್ಯಾಚರಣೆಗಳ ಸಂದರ್ಭಗಳನ್ನು ಹೊರತುಪಡಿಸಿ, ಬೇರೆ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಜಂಟಿಯಾಗಿ ಸಮರಾಭ್ಯಾಸ ನಡೆಸಿರಲಿಲ್ಲ’ ಎಂದೂ ಹೇಳಿದ್ದಾರೆ.

ಈ ಅಭ್ಯಾಸಕ್ಕಾಗಿ ರಷ್ಯಾ 1700 ಸೈನಿಕರನ್ನು ನಿಯೋಜಿಸಿದೆ. ಚೀನಾ 700 ಹಾಗೂ ಭಾರತ 200 ಸೈನಿಕರನ್ನು ಕಳುಹಿಸಿಕೊಡುತ್ತಿದೆ.

ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಗಿಸ್ತಾನ ಹಾಗೂ ತಜಕಿಸ್ತಾನ 2001ರಲ್ಲಿಎಸ್‌ಸಿಒ ಅನ್ನು ಆರಂಭಿಸಿದ್ದವು. ಭಾರತ, ಪಾಕಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶಗಳು ಬಳಿಕ ಸದ್ಯಸ್ಯತ್ವ ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT