ಇಂದೋರ್: ನವಜಾತ ಶಿಶುವನ್ನು ಇಲಿಗಳು ಕಚ್ಚಿದ ಮತ್ತೊಂದು ಘಟನೆ ಇಲ್ಲಿನ ಮಹಾರಾಜ ಯಶವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಹೆಣ್ಣುಶಿಶುವೊಂದು ಬುಧವಾರ ಮೃತಪಟ್ಟಿದೆ. ‘ಸೆಪ್ಟಿಸೆಮಿಯಾದಿಂದ (ರಕ್ತದಲ್ಲಿ ವಿಷಕಾರಿ ಅಂಶ ಪತ್ತೆಯಾಗುವುದು) ಶಿಶು ಮೃತಪಟ್ಟಿದೆ’ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

‘ಶಿಶುವು ಕೇವಲ 1.6 ಕೆ.ಜಿ. ತೂಕವಿತ್ತು. ಏಳು ದಿನಗಳ ಹಿಂದಷ್ಟೇ ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸೆಪ್ಟಿಸೆಮಿಯಾ ಕಾರಣದಿಂದ ಮಗುವಿನ ಆರೋಗ್ಯವು ತೀವ್ರ ಹದಗೆಟ್ಟಿತ್ತು. ಶಿಶುವಿಗೆ ಹುಟ್ಟುದಾಗಲೇ ಹಲವು ಸಮಸ್ಯೆಗಳಿದ್ದವು. ಕರುಳಿನಲ್ಲಿಯೂ ಸಮಸ್ಯೆ ಇತ್ತು’ ಎಂದು ಆಸ್ಪತ್ರೆಯ ಉಪ ಸೂಪರಿಂಟೆಂಡೆಂಟ್ ಡಾ. ಜಿತೇಂದ್ರ ವರ್ಮಾ ಹೇಳಿದರು.

‘ಕುಟುಂಬಸ್ಥರ ಕೋರಿಕೆ ಮೇರೆಗೆ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಮೃತದೇಹವನ್ನು ಹಾಗೆಯೇ ಹಸ್ತಾಂತರಿಸಲಾಯಿತು. ಶಿಶುವಿನ ಎಡಗೈನ ಎರಡು ಬೆರಳುಗಳನ್ನು ಇಲಿಗಳು ಕಚ್ಚಿದ್ದವು. ಇದರಿಂದ ಬೆರಳುಗಳಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು’ ಎಂದರು.

‘ಇಲಿಗಳು ಕಚ್ಚಿದ್ದ ಮತ್ತೊಂದು ನವಜಾತ ಶಿಶು ಮಂಗಳವಾರ ಮೃತಪಟ್ಟಿತ್ತು. ಈ ಮಗುವಿಗೂ ಹುಟ್ಟುವಾಗಲೇ ಹಲವು ಸಮಸ್ಯೆಗಳಿದ್ದವು. ನ್ಯುಮೋನಿಯಾ ಸೋಂಕಿನಿಂದ ಶಿಶು ಮೃತಪಟ್ಟಿತ್ತು’ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದರು. ಈ ಪ್ರಕರಣ ಸಂಬಂಧ ಇಬ್ಬರು ಶುಶ್ರೂಷಕಿಯರನ್ನು ಮಂಗಳವಾರ ಅಮಾನತು ಮಾಡಲಾಗಿತ್ತು. ಎರಡೂ ಶಿಶುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಐಸಿಯುನಲ್ಲಿ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.