ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ–ಪಾಕ್ ಪ್ರತಿನಿಧಿಗಳಿಂದ ವಿದ್ಯುತ್ ಯೋಜನೆ ಪರಿಶೀಲನೆ

Published 24 ಜೂನ್ 2024, 16:10 IST
Last Updated 24 ಜೂನ್ 2024, 16:10 IST
ಅಕ್ಷರ ಗಾತ್ರ

ಜಮ್ಮು: ಭಾರತ ಮತ್ತು ಪಾಕಿಸ್ತಾನದ ಪ್ರತಿನಿಧಿಗಳ ತಂಡಗಳು ತಟಸ್ಥ ತಜ್ಞರೊಂದಿಗೆ ಸೋಮವಾರ ಜಮ್ಮು ಕಾಶ್ಮೀರದ ಕಿಶ್ತವಾಡ ಜಿಲ್ಲೆಗೆ ಭೇಟಿ ನೀಡಿ, ಸಿಂಧೂ ಜಲ ಒಪ್ಪಂದದ ಅಡಿ ನಡೆಯುತ್ತಿರುವ ಎರಡು ಜಲವಿದ್ಯುತ್ ಯೋಜನೆಗಳ ಪರಿಶೀಲನೆ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಎರಡು ಜಲವಿದ್ಯುತ್ ಯೋಜನೆಗಳ ಪರಿಶೀಲನೆಗಾಗಿ ತಟಸ್ಥ ತಜ್ಞರೊಂದಿಗೆ ಪಾಕಿಸ್ತಾನದ ಪ್ರತಿನಿಧಿಗಳ ತಂಡವು ಭಾನುವಾರ ಇಲ್ಲಿಗೆ ಆಗಮಿಸಿತು. ಅವರೊಂದಿಗೆ ಭಾರತದ ಪ್ರತಿನಿಧಿಗಳು ಸೇರಿ ಒಟ್ಟು 40 ಮಂದಿ ಚೀನಾಬ್ ಕಣಿವೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿತು.

ಮೂವರು ಸದಸ್ಯರ ಪಾಕಿಸ್ತಾನದ ತಂಡವು, ಸಿಂಧೂ ಜಲ ಒಪ್ಪಂದದ ನಿಯಮಗಳ ಅನ್ವಯ ಪಕಲ್ ದುಲ್ ಮತ್ತು ಲೋಯರ್ ಕಲ್ನೈ ಜಲವಿದ್ಯುತ್ ಯೋಜನೆಗಳನ್ನು 2019ರಲ್ಲಿ ಕೊನೆಯ ಬಾರಿಗೆ ಪರಾಮರ್ಶಿಸಿತ್ತು. ಅದಾದ ನಂತರ ಐದು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಜಮ್ಮು ಕಾಶ್ಮೀರಕ್ಕೆ ಇದು ಪಾಕಿಸ್ತಾನದ ಪ್ರತಿನಿಧಿಗಳ ಮೊದಲ ಭೇಟಿಯಾಗಿದೆ.

ಪಾಕಿಸ್ತಾನದವರನ್ನೂ ಒಳಗೊಂಡಿರುವ ತಜ್ಞರ ತಂಡವು ಚೀನಾಬ್ ಕಣಿವೆಯ ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್ ಯೋಜನೆಗಳನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT