ಹಾಥರಸ್/ಲಖನೌ: ದಲಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಹಾಥರಸ್‌ಗೆ ಸೋಮವಾರ ಪಕ್ಷದ ನಿಯೋಗ ಕರೆದೊಯ್ಯುತ್ತಿದ್ದ ಆಮ್ ಅದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಮೇಲೆ ಮಸಿ ಎರಚಲಾಗಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಸಿಂಗ್ ಅವರು ಮಾತನಾಡುವ ವೇಳೆ, ವ್ಯಕ್ತಿಯೊಬ್ಬ ಅವರ ಬಟ್ಟೆಯ ಮೇಲೆ ಮಸಿ ಎರಚಿದ್ದು, ‘ಪಿಎಫ್‌ಐ ದಲಾಲ್ ವಾಪಸ್ ಜಾವ್’ ಎಂದು ಕೂಗಿದ್ದಾನೆ. ಘಟನೆಯ ನಂತರ ಸಿಂಗ್ ಅವರು ತಮ್ಮ ಕಾರಿನಲ್ಲಿ ಸ್ಥಳದಿಂದ ನಿರ್ಗಮಿಸಿದ್ದಾರೆ.

ಕೆಲವು ಪ್ರತಿಭಟನೆಗಳಿಗೆ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಉತ್ತರ ಪ್ರದೇಶದ ಪೊಲೀಸರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.