ಘಾಜಿಯಾಬಾದ್: ದೆಹಲಿಯ ಘಾಜಿಯಾಬಾದ್ನಲ್ಲಿ 9 ತರಗತಿ ವಿದ್ಯಾರ್ಥಿನಿಯ ಮೇಲೆ ಆಕೆ ಮನೆಯಲ್ಲೇ ಅತ್ಯಾಚಾರ ಎಸಗಿದ ಆರೋಪದಡಿ ನಾಲ್ವರು ಬಾಲಕರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ನಾಲ್ವರಲ್ಲಿ ಮೂವರು ಬಾಲಕರು ಸಂತ್ರಸ್ತೆಯ ಶಾಲೆಯಲ್ಲೇ ಓದುತ್ತಿದ್ದು, ಪರಿಚಿತರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ತಾಯಿ ಮಾರುಕಟ್ಟೆಗೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕನಿಗೆ ಸಂತ್ರಸ್ತೆ ಆಗಾಗ್ಗ ಸಂದೇಶ ಕಳುಹಿಸುತ್ತಿದ್ದಳು. ಭಾನುವಾರ ಬೆಳಿಗ್ಗೆ 11.30ಕ್ಕೆ ಆತ ಇವರ ಮನೆಗೆ ಬಂದು ಬಾಗಿಲು ಬಡಿದಿದ್ದಾನೆ. ಜತೆಗೆ ತನ್ನೊಂದಿಗೆ ಇತರ ಮೂವರನ್ನೂ ಕರೆದುಕೊಂಡು ಬಂದಿದ್ದಾನೆ. ಬಾಲಕಿಯನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ’ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

‘ಇದೇ ಸಂದರ್ಭದಲ್ಲಿ ಮಾರುಕಟ್ಟೆಗೆ ಹೋಗಿದ್ದ ತಾಯಿ ಮನೆಗೆ ಮರಳಿದ್ದಾರೆ. ಬಾಗಿಲು ತೆರೆದಿದ್ದನ್ನು ಕಂಡು ಗಾಬರಿಯಾದ ಅವರು, ನೇರವಾಗಿ ಕೋಣೆಗೆ ಹೋಗಿದ್ದಾರೆ. ಅಲ್ಲಿ ಬಾಲಕಿಯೊಂದಿಗೆ ನಾಲ್ವರು ಹುಡುಗರನ್ನು ಕಂಡ ಅವರು, ತಕ್ಷಣ ಕೊಠಡಿಯ ಬಾಗಿಲು ಹಾಕಿ ಬೀಗ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಪೊಲೀಸರು ಮನೆಗೆ ಬರುವುದರೊಳಗಾಗಿ ವಸತಿ ಸಮುಚ್ಚಯದ ಆಡಳಿತ ಮಂಡಳಿಯ ಸದಸ್ಯರು ಬಾಲಕಿ ಮನೆಗೆ ತೆರಳಿ, ಬಾಲಕರನ್ನು ಬಿಡಿಸಿ ಹೊರಕ್ಕೆ ಕಳುಹಿಸಿದ್ದಾರೆ. ಬಾಲಕಿಯ ತಂದೆ ನಾಲ್ವರು ಹುಡುಗರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಿತ ಬಾಲಕರು 11, 10 ಹಾಗೂ 9 ನೇ ತರಗತಿಯವರಾಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಹೇಳಿಕೆಯನ್ನು ಈವರೆಗೂ ದಾಖಲಿಸಿಕೊಂಡಿಲ್ಲ. ಆರೋಪಿತರ ಬಂಧನ ಈವರೆಗೂ ಆಗಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿದೆ’ ಎಂದು ಎಸಿಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.