ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ–2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳನ್ನು ಮಧ್ಯಂತರ ಪರಿಹಾರದ ಸೀಮಿತ ಉದ್ದೇಶಕ್ಕಾಗಿ ಇದೇ 20ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು ಬಳಕೆಯ ಕಾರಣದಿಂದಾಗಿ ವಕ್ಫ್, ಕೇಂದ್ರ ವಕ್ಫ್ ಪರಿಷತ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರ ನಾಮನಿರ್ದೇಶನ ಮತ್ತು ವಕ್ಫ್ ಅಡಿಯಲ್ಲಿ ಸರ್ಕಾರಿ ಭೂಮಿಯ ಗುರುತಿಸುವಿಕೆ ಕುರಿತ ಮೂರು ವಿಷಯಗಳಲ್ಲಿ ತಡೆಯಾಜ್ಞೆಯ ಮಧ್ಯಂತರ ಪರಿಹಾರ ಅಗತ್ಯವಿದೆಯೇ ಎಂಬುದನ್ನು ಪರಿಗಣಿಸಲಿದೆ.

ಈ ಮಧ್ಯೆ, ‘ಕೇಂದ್ರ ವಕ್ಫ್ ಪರಿಷತ್ತು ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಂದಿನ ವಿಚಾರಣೆಯವರೆಗೆ ಯಾವುದೇ ನೇಮಕಾತಿ ನಡೆಸುವುದಿಲ್ಲ ಮತ್ತು ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿರುವ ಆಸ್ತಿಗಳನ್ನು ಡಿ–ನೋಟಿಫೈ ಮಾಡುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಭರವಸೆ ನೀಡಿದ್ದಾರೆ. ಯಥಾಸ್ಥಿತಿ ಮುಂದುವರಿಯಲಿದೆ’ ಎಂದು ಪೀಠ ಸ್ಪಷ್ಟಪಡಿಸಿತು.

‘ವಾದ ಮಂಡಿಸಲು ನಾವು ಎರಡೂ ಕಡೆಯವರಿಗೆ ತಲಾ ಎರಡು ಗಂಟೆಗಳ ಕಾಲಾವಕಾಶ ನೀಡುತ್ತೇವೆ’ ಎಂದು ಪೀಠವು ತಿಳಿಸಿತು.

ಕಾನೂನಿನ ಸಿಂಧುತ್ವ ಪ್ರಶ್ನಿಸಿರುವವರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರದೊಳಗೆ ತಮ್ಮ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸಬೇಕು ಎಂದು ಪೀಠ ಸೂಚಿಸಿತು.

ಅರ್ಜಿಗಳ ವಿಚಾರಣೆ ಮುಂದೂಡುತ್ತಾ ಮುಖ್ಯ ನ್ಯಾಯಮೂರ್ತಿ, ‘ನಾವು ಮಧ್ಯಂತರ ಪರಿಹಾರದ ವಿಷಯವನ್ನು ಮಾತ್ರ ಮಂಗಳವಾರ ಪರಿಗಣಿಸುತ್ತೇವೆ’ ಎಂದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ಅಭಿಷೇಕ್ ಮನು ಸಿಂಘ್ವಿ, ಹುಜೆಫಾ ಅಹ್ಮದಿ ಮತ್ತು ಸಿ.ಯು. ಸಿಂಗ್ ಹಾಗೂ ಕೇಂದ್ರ ಸರ್ಕಾರದ ಪರವಾಗಿ ತುಷಾರ್ ಮೆಹ್ತಾ ಅವರ ವಾದಗಳನ್ನು ಪೀಠವು ಸಂಕ್ಷಿಪ್ತವಾಗಿ ಆಲಿಸಿತು.

2025ರ ಕಾಯ್ದೆಯಲ್ಲಿರುವ ಅಸಂವಿಧಾನಿಕ ನಿಯಮಗಳ ಬಗ್ಗೆ ಟಿಪ್ಪಣಿ ಸಲ್ಲಿಸುವುದಾಗಿ ಸಿಬಲ್ ತಿಳಿಸಿದರು.

1995ರ ಕಾಯ್ದೆ ಕುರಿತ ಅರ್ಜಿಯ ವಿಚಾರಣೆ ಇಲ್ಲ: ‘1995ರ ಹಿಂದಿನ ವಕ್ಫ್ ಕಾನೂನಿನ ನಿಯಮಗಳಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಯಾವುದೇ ಅರ್ಜಿಯನ್ನು ಮೇ 20ರ ವಿಚಾರಣೆ ಸಂದರ್ಭದಲ್ಲಿ ಪರಿಗಣಿಸುವುದಿಲ್ಲ. 2025ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಕೆಲವರು ಪ್ರಶ್ನಿಸಿದ್ದಾರೆ ಎಂಬ ಕಾರಣಕ್ಕೆ 1995ರ ಕಾಯ್ದೆಗೆ ಮತ್ತೊಬ್ಬರು ಅಡ್ಡಿಪಡಿಸಲು ಬಯಸಿದರೆ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪೀಠ ಸೂಚ್ಯವಾಗಿ ಹೇಳಿತು.

ಐದು ರಿಟ್ ಅರ್ಜಿಗಳನ್ನು ಪ್ರಮುಖ ಅರ್ಜಿಗಳೆಂದು ಪರಿಗಣಿಸಿರುವುದಕ್ಕೆ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ‘ಈ ಎಲ್ಲ ಅರ್ಜಿಗಳು ಮುಸ್ಲಿಂ ಸಮುದಾಯದಿಂದ ಸಲ್ಲಿಕೆಯಾಗಿವೆ’ ಎಂದು ಗಮನ ಸೆಳೆದರು.

ಇದಕ್ಕೆ ತುಷಾರ್ ಮೆಹ್ತಾ ಮತ್ತು ಸಿಬಲ್ ಪ್ರತಿವಾದ ಮಂಡಿಸಿ, ‘ನ್ಯಾಯಾಲಯವು ಪ್ರಕರಣದ ಹೆಸರನ್ನು 'ವಕ್ಫ್ ತಿದ್ದುಪಡಿ ಕಾಯ್ದೆಗೆ ಮರು ಸವಾಲು' ಎಂದು ಬದಲಾಯಿಸಲು ಇದೇ ಕಾರಣ’ ಎಂದು ಹೇಳಿದರು.

1995ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳನ್ನೂ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಕೋರಿದರು.

ಆಗ ಸಿಜೆಐ ಗವಾಯಿ, ‘ಈ ಕಾಯ್ದೆ 1995ರಿಂದ ಜಾರಿಯಲ್ಲಿದೆ. ಆಗ ನೀವು ಪ್ರಶ್ನಿಸಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ವಿಷ್ಣು ಶಂಕರ್ ಪ್ರತಿಕ್ರಿಯಿಸಿ, ‘1995ರ ಕಾಯ್ದೆಯನ್ನು ಈ ಹಿಂದೆಯೇ ಪ್ರಶ್ನಿಸಲಾಗಿತ್ತು. ಹೈಕೋರ್ಟ್ಗೆ ಹೋಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ನಾವು ಸಲ್ಲಿಸಿರುವ 140 ಅರ್ಜಿಗಳು ವಿವಿಧ ಹೈಕೋರ್ಟ್ಗಳಲ್ಲಿ ಬಾಕಿ ಇವೆ. ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿರುವ ಹೊಸ ಅರ್ಜಿ ಸಲ್ಲಿಸಿದ್ದೇವೆ’ ಎಂದರು.

‘2025ರ ಕಾಯ್ದೆಯಲ್ಲಿ 1995ರ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಲು ನಾವು ನಿಮಗೆ ಹೇಗೆ ಅವಕಾಶ ನೀಡಲು ಸಾಧ್ಯ’ ಎಂದು ಸಿಜೆಐ ಗವಾಯಿ ಕೇಳಿದರು. ಆಗ ವಿಷ್ಣು ಶಂಕರ್, ‘2025ರ ಕಾಯ್ದೆಯಡಿ ಬಳಕೆಯ ಕಾರಣದಿಂದಾಗಿ ವಕ್ಫ್ ವಿಷಯದ ಮಧ್ಯಂತರ ಪರಿಹಾರ ಕೋರುತ್ತಿದ್ದೇವೆ’ ಎಂದರು. ಇದಕ್ಕೆ ಪೀಠ ಅವಕಾಶ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.