‘ಒಂಬೈನೂರು ಮೂವತ್ತಾರು ಕೋಟಿ ಅಂದ್ರ 936ರ ಮುಂದೆ ಆರು ಸೊನ್ನೆ… ಅಬ್ಬಬ್ಬಾ!’ ಬೆಕ್ಕಣ್ಣ ವರದಿ ಓದುತ್ತ ಮೂಗಿನ ಮೇಲೆ ಬೆರಳಿಟ್ಟುಕೊಂಡು ಉದ್ಗರಿಸಿತು.

‘ಆರಲ್ಲಲೇ, ಏಳು ಸೊನ್ನೆ ಬರತಾವು. ಲೆಕ್ಕದಾಗೆ ನೀ ಪೂರಾ ಸೊನ್ನೆ ಆಗಿದ್ರೂ, ಅಂಕಿಗಳ ಮುಂದೆ ಸೊನ್ನೆ ಎಲ್ಲಿ, ಎಷ್ಟು ಬರತಾವು ಅಂತ ಗೊತ್ತಿರಬಕು’ ಎಂದು ತಿದ್ದಿದೆ.

‘₹936 ಕೋಟಿ ಆಸ್ತಿಯಿರೋ ಚಂದ್ರಬಾಬು ನಾಯ್ಡು ಅಂಕಲ್ಲು ಇಡೀ ದೇಶದಾಗೆ ಶ್ರೀಮಂತ ಸಿಎಮ್ಮು’ ಎಂದು ವರದಿ ತೋರಿಸಿತು.

‘₹51.9 ಕೋಟಿ ಆಸ್ತಿ ಇರೋ ನಮ್ ಸಿದ್ದೂ ಅಂಕಲ್ಲು ಮೂರನೇ ಶ್ರೀಮಂತ ಸಿಎಂ! ಬಾಪ್ರೇ!’ ವರದಿ ಓದುತ್ತ ನಾನೂ ಮೂಗಿನ ಮೇಲೆ ಬೆರಳಿಟ್ಟೆ.

‘ಸರ್ಕಾರದ ಕೆಲಸ ದೇವರ ಕೆಲಸ… ಜನಸೇವೆಯೇ ಧನಾರ್ಜನ ಸೇವೆ! ಹಿಂಗಾಗಿ ಇವರಿಗೆಲ್ಲ ಕುಬೇರ ದೇವರು ಒಲಿದಿರತಾನೆ’ ಎಂದು ಬೆಕ್ಕಣ್ಣ ನಕ್ಕಿತು.

‘ಮೂವತ್ತರಲ್ಲಿ 28 ಸಿಎಂಗಳು ಕೋಟ್ಯಧಿಪತಿಗಳು, ಕೊನೇ ಪಕ್ಷ ಒಂದು ಕೋಟಿ ಆಸ್ತಿ ಇದ್ದವರು. ₹15 ಲಕ್ಷ ಆಸ್ತಿಯಿರೋ ಬಂಗಾಳದ ಮಮತಾ ದೀದಿ, ₹55 ಲಕ್ಷ ಆಸ್ತಿಯಿರೋ ಕಾಶ್ಮೀರದ ಓಮರ್ ಅಬ್ದುಲ್ಲಾ, ಇವರಿಬ್ಬರೇ ಲಕ್ಷಾಧಿಪತಿಗಳು... ಪಾಪ…’ ಎಂದು ನಾನು ಲೊಚಗುಟ್ಟಿದೆ.

‘ರಾಜಕಾರಣಿ=ಕೋಟ್ಯಧಿಪತಿ ಅಂತ ಸಮೀಕರಣನೇ ಐತಿ. ಅಂತಾದ್ರಲ್ಲಿ ಇವರಿಬ್ಬರು ಅದೆಂಗೆ ರೊಕ್ಕನೇ ಮಾಡಿಕೊಂಡಿಲ್ಲ ಅಂತ?’ ಬೆಕ್ಕಣ್ಣ ಹುಬ್ಬೇರಿಸಿತು.

‘ಇಷ್ಟ್ ವರ್ಷ ರಾಜಕಾರಣದಾಗೆ ಇದ್ದು ಒಂದ್ ಕೋಟಿ ಗಳಿಸಿಲ್ಲ ಅಂದ್ರ ರಾಜಕಾರಣದ ಕಿಮ್ಮತ್ತನ್ನೇ ಕಳಿತೀರಿ ನೀವು ಅಂತ ಉಳಿದ ಸಿಎಮ್ಮುಗಳು ಅವರಿಬ್ಬರಿಗೂ ಬೈತಿರಬೇಕು’ ಎಂದೆ.

‘ನಿಮಗಿಂತ ನಾನೇ ವಾಸಿ… ಭಿಕ್ಷೆ ಬೇಡೂ ಕೆಲಸದಲ್ಲೇ ₹7.5 ಕೋಟಿ ಆಸ್ತಿ ಮಾಡೀನಿ. ನನ್ನ ನೋಡಿ ಕಲೀರಿ ಅಂತ ಮುಂಬೈನ ಭರತ್ ಜೈನ್ ಅನ್ನೋ ಭಿಕ್ಷುಕ ಇಬ್ಬರಿಗೂ ಹೇಳ್ಯಾನಂತೆ’ ಎಂದು ಬೆಕ್ಕಣ್ಣ ಮುಸಿ ಮುಸಿ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.