ಅಮರಾವತಿ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೆ, ವಿದೇಶ ಪ್ರವಾಸ ಕೈಗೊಂಡ ಹಿರಿಯ ಐಪಿಎಸ್ ಅಧಿಕಾರಿಯನ್ನು ಆಂಧ್ರ ಪ್ರದೇಶ ಸರ್ಕಾರವು ಭಾನುವಾರ ಅಮಾನತುಗೊಳಿಸಿದೆ.

ಸರ್ಕಾರದದಿಂದ ಸೂಕ್ತ ಅನುಮತಿ ಪಡೆಯದೆ, ವಿದೇಶ ಪ್ರವಾಸ ಕೈಗೊಂಡ ಆರೋಪದ ಮೇಲೆ ಹುದ್ದೆ ನಿರೀಕ್ಷಿಸುತ್ತಿರುವ ಡಿಜಿಪಿ ರ್ಯಾಂಕ್ನ ಅಧಿಕಾರಿ ಪಿ.ವಿ. ಸುನಿಲ್ ಕುಮಾರ್ ಅವರನ್ನು ಅಮಾನತುಗೊಳಿಸಿ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ್ ಆದೇಶ ಹೊರಡಿಸಿದ್ದಾರೆ.

‘ಅಖಿಲ ಭಾರತ ಸೇವಾ ನಿಯಮ (ಶಿಸ್ತು ಹಾಗೂ ಮೇಲ್ಮನವಿ) 1969 ನಿಯಮ 3(1) ಅಡಿಯಲ್ಲಿ ಅಧಿಕಾರ ಚಲಾಯಿಸುವ ವೇಳೆ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ಪಿ.ವಿ. ಸುನಿಲ್ ಕುಮಾರ್ ಅವರನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಅಮಾನತುಗೊಳಿಸಲಾಗಿದೆ’ ಎಂದು ಮುಖ್ಯ ಕಾರ್ಯದರ್ಶಿ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

2019ರಿಂದ 2024ರ ಅವಧಿಯಲ್ಲಿ ಪೂರ್ವಾನುಮತಿ ಪಡೆಯದೆ, ಕುಮಾರ್ ಅವರು ಜಾರ್ಜಿಯಾ, ಯುಎಇ, ಸ್ವೀಡನ್, ಯುಎಸ್ಎ ಹಾಗೂ ಬ್ರಿಟನ್ಗೆ ಪ್ರವಾಸ ಕೈಗೊಂಡಿದ್ದರು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.