ನವದೆಹಲಿ: ಭಯೋತ್ಪಾದಕ ಸಂಘಟನೆ ಐಎಸ್ಐಎಸ್ನ ಸ್ಲೀಪರ್ ಸೆಲ್ನ ಇಬ್ಬರು ಶಂಕಿತರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಅಬ್ದುಲ್ ಫಯಾಜ್ ಶೇಖ್ (ಡೈಪರ್ವಾಲಾ) ಮತ್ತು ತಲ್ಹಾ ಖಾನ್ ಬಂಧಿತರು. ಮಹಾರಾಷ್ಟ್ರದ ಪುಣೆಯಲ್ಲಿ ಐಇಡಿ ಸ್ಪೋಟಕಗಳನ್ನು ಸಿದ್ಧಪಡಿಸಿ ಪರೀಕ್ಷಿಸಿದ 2023ರ ಪ್ರಕರಣದಲ್ಲಿ ಈ ಇಬ್ಬರು ಬೇಕಾಗಿದ್ದರು.

ಇಂಡೊನೇಷ್ಯಾದ ಜಕಾರ್ತದಿಂದ ಈ ಇಬ್ಬರು ಭಾರತಕ್ಕೆ ವಾಪಸಾಗುವ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯವು ಬಂಧನ ರಹಿತ ವಾರಂಟ್ ಹೊರಡಿಸಿತ್ತು. ಅಪರಾಧ ಕೃತ್ಯಗಳ ಪಿತೂರಿ ನಡೆಸುತ್ತಿದ್ದ ಇವರ ಕುರಿತು ಮಾಹಿತಿ ನೀಡಿದವರಿಗೆ ₹3 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು.

‘ಇರಾಕ್ ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ಗೆ ಸೇರಿದ ಪುಣೆಯ ಎಂಟು ಸ್ಲೀಪರ್ ಸೆಲ್ ಸದಸ್ಯರನ್ನು ಎನ್ಐಎ ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭಾರತದಲ್ಲಿ ಶಾಂತಿ ಭಂಗ ಮತ್ತು ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡಲು ಇವರು ಸಂಚು ರೂಪಿಸುತ್ತಿದ್ದರು. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ತರುವ ಹಾಗೂ ಐಎಸ್ಐಎಸ್ ಕಾರ್ಯಸೂಚಿಯನ್ನು ಜಾರಿ ಮಾಡುವ ತಂತ್ರವನ್ನು ರೂಪಿಸುವ ಉದ್ದೇಶದಿಂದ ದೇಶದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನಾ ಕೃತ್ಯ ಎಸಗಲು ಯೋಜನೆ ಹೊಂದಿದ್ದರು’ ಎಂದು ಎನ್ಐಎ ಹೇಳಿದೆ.

ಇದೇ ಪ್ರಕರಣದಲ್ಲಿ ಈವರೆಗೂ ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಕಿ, ಅಬ್ದುಲ್ ಖಾದಿರ್ ಪಠಾಣ್, ಸಿಂಬಾ ನಾಸಿರುದ್ದೀನ್ ಖಾಜಿ, ಝುಲ್ಫಿಕರ್ ಅಲಿ ಬರೋಡ್ವಾಲಾ, ಶಮಿಲ್ ನಚಾನ್, ಅಕೀಫ್ ನಚಾನ್ ಮತ್ತು ಶಾನ್ವಾಜ್ ಆಲಂರನ್ನು ಎನ್ಐಎ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.