ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ತಾರ್‌ ಅನ್ಸಾರಿಯ ₹ 127 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆ

Last Updated 13 ಏಪ್ರಿಲ್ 2023, 13:11 IST
ಅಕ್ಷರ ಗಾತ್ರ

ನವದೆಹಲಿ: ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಮತ್ತು ಅವರ ಸಹಚರರ ವಿರುದ್ಧ ಕ್ರಮದ ಭಾಗವಾಗಿ ಆದಾಯ ತೆರಿಗೆ ಇಲಾಖೆ ಉತ್ತರ ಪ್ರದೇಶ ಮತ್ತು ಇತರ ಸ್ಥಳಗಳಲ್ಲಿ ಅವರಿಗೆ ಸೇರಿದ ₹127 ಕೋಟಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಇಲಾಖೆಯ ಲಖನೌ ತನಿಖಾ ಘಟಕವು ಮಂಗಳವಾರ ಈ ಪ್ರಕರಣದ ಮೊದಲ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದು ಗಾಜಿಪುರ ಜಿಲ್ಲೆಯಲ್ಲಿ ಸುಮಾರು ₹1.29 ಕೋಟಿ (ಖರೀದಿಸಿದ ದರ) ಮೌಲ್ಯದ ಭೂಮಿ ಆಗಿದೆ. ಇಲಾಖೆಯ ಮುಟ್ಟುಗೋಲು ಆದೇಶದ ಪ್ರಕಾರ ಈ ಆಸ್ತಿಯ ಮಾರುಕಟ್ಟೆ ಮೌಲ್ಯ ಸುಮಾರು ₹ 12 ಕೋಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT