ಢಾಕಾ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಗುರುವಾರ ಇಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.

‘ನೆರೆ ರಾಷ್ಟ್ರಗಳು ಮೊದಲು’ ಎಂಬ ಭಾರತದ ನೀತಿಗೆ ಅನುಗುಣವಾಗಿ ದಿನದ ಭೇಟಿಗೆ ಜೈಶಂಕರ್ಇಲ್ಲಿಗೆ ಬಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಚ್ 26ರ ಬಾಂಗ್ಲಾದೇಶ ಭೇಟಿಗೆ ಪೂರ್ವಭಾವಿಯಾಗಿ ಅಗತ್ಯ ವೇದಿಕೆ ರೂಪಿಸುವುದು ಭೇಟಿ ಉದ್ದೇಶ.

ಕುರ್ಮಿಟೊಲಾ ವಾಯುನೆಲೆಯಲ್ಲಿ ಜೈಶಂಕರ್ ಅವರನ್ನು ಮೊಮೆನ್ ಬರಮಾಡಿಕೊಂಡರು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗುವ ಸಂಭವವಿದೆ. ದ್ವಿಪಕ್ಷೀಯ ಬಾಂಧವ್ಯ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು ಎಂದು ಭಾರತದ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.

ಬಾಂಗ್ಲಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಶರಿಯಾರ್ ಅಲಾಮ್ ಅವರು, ಬಾಂಗ್ಲಾದೇಶದ ವಿಮೋಚನಾ ದಿನದ 50ನೇ ವಾರ್ಷಿಕೋತ್ಸವ ನಿಮಿತ್ತ ಮಾರ್ಚ್ 17–26ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.