ನವದೆಹಲಿ: ದೇಶದ 100 ಗ್ರಾಮಗಳಲ್ಲಿ ನಲ್ಲಿ ನೀರಿನ ಬಳಕೆಯ ಮಾದರಿಗಳನ್ನು ಅರಿಯುವ ನಿಟ್ಟಿನಲ್ಲಿ ಮೇಲ್ವಿಚಾರಣೆ ನಡೆಸಲು ಸೆನ್ಸರ್ ಆಧಾರಿತ ವ್ಯವಸ್ಥೆಯೊಂದನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ರೂಪಿಸಿದೆ.

ಪ್ರಾಯೋಗಿಕ ಹಂತದಲ್ಲಿನ ಈ ವ್ಯವಸ್ಥೆಯಲ್ಲಿ ಅಂತರ್ಜಾಲ ಆಧರಿತ (ಐಒಟಿ) ಸೆನ್ಸರ್ಗಳು ಮತ್ತು ಫ್ಲೋ ಮೀಟರ್ಗಳನ್ನು ಒವರ್ ಹೆಡ್ ನೀರಿನ ಟ್ಯಾಂಕುಗಳಲ್ಲಿ ಅಳವಡಿಸಲಾಗುವುದು. ಈ ವ್ಯವಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಲ್ಲಿನ ನೀರಿನ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವುದಲ್ಲದೆ, ನೀರಿನ ಬಳಕೆಯ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಲಿದೆ. ಈ ವ್ಯವಸ್ಥೆಯಿಂದ ಪ್ರತಿ ಮನೆಗೂ ಸರಬರಾಜು ಮಾಡುವ ನೀರಿನ ಬೆಲೆಯನ್ನು ನಿರ್ಧರಿಸುವ ಗುರಿಯನ್ನೂ ಹೊಂದಿದೆ.

‘ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಗುಜರಾತ್, ಮಣಿಪುರ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಲಡಾಖ್ನಲ್ಲಿನ 11 ಕೇಂದ್ರಗಳಲ್ಲಿ ಸಚಿವಾಲಯವು ಈಗಾಗಲೇ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಸ್ಥಾಪಿಸಿದೆ. ಗ್ರಾಹಕರಿಗೆ ಹೊರೆಯಾಗದಂತೆ ಕೈಗೆಟುಕುವ ದರದಲ್ಲಿ ನೀರು ಪೂರೈಸಲು ಸರಿಯಾದ ದತ್ತಾಂಶವನ್ನು (ಡೇಟಾ) ಅರಿಯಲು ಕೇಂದ್ರ ಸರ್ಕಾರವು ಉತ್ಸುಕವಾಗಿದೆ’ ಎಂದು ಜಲಶಕ್ತಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರ ಡಿಸೆಂಬರ್ನೊಳಗೆ ಫ್ಲೋರೈಡ್ಯುಕ್ತ ನೀರು ಮತ್ತು ಆರ್ಸೆನಿಕ್ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಮುದಾಯ ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಯನ್ನು ಪೂರ್ಣಗೊಳಿಸುವಂತೆ ಜಲಶಕ್ತಿ ಸಚಿವಾಲಯವು ರಾಜ್ಯಗಳಿಗೆ ಸೂಚನೆ ನೀಡಿದೆ.

ನೀರಿನ ಗುಣಮಟ್ಟದ ಮೇಲೆ ಕಣ್ಗಾವಲಿರಿಸಲು ಹಾಗೂ ಈ ನಿಟ್ಟಿನಲ್ಲಿ ಸ್ಥಳೀಯ ಸಮುದಾಯವನ್ನು ಸಬಲೀಕರಣಗೊಳಿಸಲು ರಾಜ್ಯಗಳು ಪ್ರತಿ ಹಳ್ಳಿಯಲ್ಲಿ ಐವರು ಮಹಿಳೆಯರಿಗೆ ತರಬೇತಿ ನೀಡಿವೆ. ಈ ಮಹಿಳೆಯರುನೀರಿನ ಗುಣಮಟ್ಟ ಪರೀಕ್ಷಿಸಲು ಮತ್ತು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ತರಬೇತಿ ಪಡೆದಿದ್ದು, ಗ್ರಾಮ ಪಂಚಾಯಿತಿಗಳು ಪೂರೈಸುವ ಸರಳವಾದ ಕಿಟ್ನಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಮಾಡುತ್ತಾರೆ.

ನೀರಿನ ಗುಣಮಟ್ಟದ ನಿಯಮಿತ ತಪಾಸಣೆಯಿಂದ ನೀರಿನಿಂದ ಬರಬಹುದಾದ ಕಾಯಿಲೆಗಳನ್ನು ತಡೆಗಟ್ಟಬಹುದು. ಕುಡಿಯುವ ನೀರಿನ ಎಲ್ಲಾ ಮೂಲಗಳನ್ನು ವರ್ಷಕ್ಕೊಮ್ಮೆ, ರಾಸಾಯನಿಕ ಮಾಲಿನ್ಯ ಮತ್ತು ಬ್ಯಾಕ್ಟೀರಿಯಾ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಮಾಡಬೇಕು ಎಂದೂ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ.

2024ರ ವೇಳೆಗೆ ದೇಶದ ಪ್ರತಿ ಮನೆಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019ರ ಆಗಸ್ಟ್ 15ರಂದು ಜಲಜೀವನ ಮಿಷನ್ಗೆ ಚಾಲನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.